ಬೆಂಗಳೂರು: 75 ಎಲೆಕ್ಟ್ರಿಕ್ ಬಸ್‌ಗಳನ್ನು ಸಿಲಿಕಾನ್ ಸಿಟಿಯ ರಸ್ತೆಗೆ ಇಳಿಸಿದ ಬಿಎಂಟಿಸಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಎಂಟಿಸಿಯ 75 ಎಲೆಕ್ಟ್ರಿಕ್ ಬಸ್‌ಗಳಿಗೆ ಇಂದು ಚಾಲನೆ ನೀಡಿದರು. ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿ ರಸ್ತೆಗಿಳಿಸಿದೆ.
12 ಮೀ. ಉದ್ದದ ನಾನ್ ಎಸಿ ಈ ಬಸ್ಗಳು 40+1 ಆಸನಗಳನ್ನು ಹೊಂದಿವೆ. ಈ ಬಸ್ಗಳು ಮೆಜೆಸ್ಟಿಕ್- ವಿದ್ಯಾರಣ್ಯಪುರ, ಶಿವಾಜಿನಗರ-ಯಲಹಂಕ, ಯಲಹಂಕ- ಕೆಂಗೇರಿ, ಮೆಜೆಸ್ಟಿಕ್-ಯಲಹಂಕ ಉಪನಗರ, ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಸಂಚರಿಸಲಿವೆ.
ಎಲೆಕ್ಟ್ರಿಕ್ ಬಸ್ಗಳು ಒಂದು ಬಾರಿ ಚಾರ್ಜ್ ಆದ ನಂತರನಲ್ಲಿ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀ.ಗಳನ್ನು Opportunity Charging ಮೂಲಕ ಕಾರ್ಯಾಚರಿಸಲಾಗುತ್ತದೆ. ಅಂದರೆ ಬಸ್ಗಳು ರಿಚಾರ್ಜ್ ಮಾಡಲು ಡಿಪೋಗಳಿಗೆ ಹೋಗಬೇಕಿಲ್ಲ. ಬದಲಿಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ಸಮಯ ಸಿಕ್ಕಾಗ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ Opportunity Charging ಗೆ ಕೆಂಪೇಗೌಡ ಬಸ್ ನಿಲ್ದಾಣ (ಘಟಕ-07), ಯಶವಂತಪುರ (ಘಟಕ-08), ಕೆಂಗೇರಿ (ಘಟಕ-12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.
ಮೆಜೆಸ್ಟಿಕ್- ವಿದ್ಯಾರಣ್ಯಪುರ: 10 ಬಸ್ಗಳು ಶಿವಾಜಿನಗರ- ಯಲಹಂಕ: 20ಯಲಹಂಕ- ಕೆಂಗೇರಿ: 10ಮೆಜೆಸ್ಟಿಕ್- ಯಲಹಂಕ ಉಪನಗರ: 15ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್-20