ಮೊದಲ ಪಟ್ಟಿಯಲ್ಲಿ 39 ಶಾಸಕರಿಗೆ ಮಣೆ! : ನಿಗಮ ಮಂಡಳಿ ಪಟ್ಟಿ ಯಾವುದೇ ಕ್ಷಣದಲ್ಲಿ ರಿಲೀಸ್!

ಮೊದಲ ಪಟ್ಟಿಯಲ್ಲಿ 39 ಶಾಸಕರಿಗೆ ಮಣೆ! : ನಿಗಮ ಮಂಡಳಿ ಪಟ್ಟಿ ಯಾವುದೇ ಕ್ಷಣದಲ್ಲಿ ರಿಲೀಸ್!

ದೆಹಲಿ : ರಾಜ್ಯದ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಈಗಾಗಲೇ ಸಿದ್ಧಪಡಿಸಲಾದ ಆಕಾಂಕ್ಷಿತರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಸಲ್ಲಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ನ ದೆಹಲಿ ಮೂಲಗಳು ತಿಳಿಸಿವೆ. 

ಬರ ಪರಿಹಾರ ಹಣ ಬಿಡುಗಡೆಗಾಗಿ ನಿನ್ನೆಯೇ ಪ್ರಧಾನಿ ಭೇಟಿಗೆಂದು ತೆರಳಿದ ಸಿಎಂ ಸಿದ್ದರಾಮಯ್ಯ ಅವರು ಬಳಿಕ ತಮ್ಮ ಪಕ್ಷದ ವರಿಷ್ಠರನ್ನು ಭೇಟಿಯಾಗಿ ರಾಜ್ಯದ ನಿಗಮ ಮಂಡಳಿಗಳ ಪಟ್ಟಿಯನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು. 

ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದ್ದರು. 
ಮೂಲಗಳ ಪ್ರಕಾರ, ಬುಧವಾರ ಪಟ್ಟಿ ಬಿಡುಗಡೆಯಾಗಬಹುದು ಎನ್ನಲಾಗುತ್ತಿದ್ದು ಆಕಾಂಕ್ಷಿಗಳಲ್ಲಿ ಕುತೂಹಲ ಮೂಡಿಸಿದೆ. ಮೊದಲ ಹಂತದಲ್ಲಿ ಒಟ್ಟಿ 39 ಹಿರಿಯ ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಜಾಗ ಮಾಡಿಕೊಡಲಾಗಿದೆ. ಬಳಿಕ ಎರಡನೇ ಹಂತದಲ್ಲಿ ಮೇಲ್ಮನೆ ಶಾಸಕರು, ಮಾಜಿ ಶಾಸಕ/ಸಚಿವರು ಮತ್ತು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತೆ ಅನ್ನೋ ಮಾಹಿತಿ ಲಭ್ಯವಾಗಿದೆ.