2022ರ ಟಿ20 ವಿಶ್ವಕಪ್‌ನಲ್ಲಿ ಮಿಂಚಲಿರುವ 5 ಆಟಗಾರರನ್ನು ಹೆಸರಿಸಿದ ಐಸಿಸಿ

ದುಬೈ: ಐಸಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 2022ರ ಟಿ20 ವಿಶ್ವಕಪ್‌ನಲ್ಲಿ ಮಿಂಚುವ ಐದು ಆಟಗಾರರನ್ನು ಹೆಸರಿಸಿದೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಶ್ರೀಲಂಕಾ ಆಲ್‌ರೌಂಡರ್ ವನಿಂದು ಹಸರಂಗ, ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಭಾರತ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನದ ವಿಕೆಟ್ ಕೀಪರ್-ಓಪನರ್ ಮುಹಮ್ಮದ್ ರಿಜ್ವಾನ್ 2022ರ ಟಿ20 ವಿಶ್ವಕಪ್‌ನಲ್ಲಿ ಮಿಂಚಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
"ರಿಜ್ವಾನ್‌ಗಿಂತ ಹೆಚ್ಚು ಸ್ಥಿರವಾದ T20 ಬ್ಯಾಟರ್ ಮತ್ತೊಬ್ಬರಿಲ್ಲ" ಎಂದು ಐಸಿಸಿ ಲೇಖನಲ್ಲಿ ಉಲ್ಲೇಖಿಸಲಾಗಿದೆ.