IPL 2024 | RCBvsKKR: ಕೆಕೆಆರ್ ಗೆ ಭರ್ಜರಿ ಗೆಲುವು - ಆರ್ ಸಿಬಿಗೆ ಸತತ 6ನೇ ಸೋಲು

IPL 2024 | RCBvsKKR: ಕೆಕೆಆರ್ ಗೆ ಭರ್ಜರಿ ಗೆಲುವು - ಆರ್ ಸಿಬಿಗೆ ಸತತ 6ನೇ ಸೋಲು

ಕೋಲ್ಕತ್ತಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಜಯದ ಲಯಕ್ಕೆ ‌ಮರಳುವ ಲಕ್ಷಣಗಳು ಕಾಣುತ್ತಿಲ್ಲ.‌ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಕೇವಲ‌ 1 ರನ್‌ನಿಂದ ಸೋಲು ಕಂಡಿದೆ. ಇದರೊಂದಿಗೆ ಈ‌ ಬಾರಿಯ ಟೂರ್ನಿಯಲ್ಲಿ ಸತತ 6ನೇ ಸೋಲಿಗೆ ಗುರಿಯಾಗಿದೆ.‌ 

ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ದುಕೊಂಡಿತು.‌ ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 6 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಆರ್ ಸಿಬಿ 20 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಪರಾಭವಗೊಂಡಿತು.‌