ಕಲಘಟಗಿ: ಆಕಸ್ಮಿಕ ಬೆಂಕಿ ತಗುಲಿ 80 ಎಕರೆ ಕಬ್ಬು ಬೆಳೆ ಹಾನಿ

ಕಲಘಟಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ 11 ಜನ ರೈತರಿಗೆ ಸೇರಿದ 80 ಎಕರೆ ಕಬ್ಬು ಬೆಳೆ ಹಾನಿಯಾದ ಘಟನೆ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಆಕಸ್ಮಿಕವಾಗಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ರೈತರು ಅಗ್ನಿಶಾಮಕ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ವೇಳೆಗೆ 80 ಎಕರೆ ಕಬ್ಬು ಬೆಳೆ ಹಾನಿಯಾಗಿದೆ. ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಲಪ್ಪ ಬೇಗೂರ, ಮಲ್ಲಿಕಾರ್ಜುನ ಹಿರೇಮಠ, ನಾಗಯ್ಯ ಕೋಟಿ, ಗಂಗಾದರಯ್ಯ ಹೀರೆಮಠ, ಮಹಾದೇವಪ್ಪ ನೂಲ್ವಿ, ರಾಮಪ್ಪ ಮುತ್ತಗಿ, ಮಹದೇವಪ್ಪ ಬಸನಕೊಪ್ಪ, ಮುತ್ತುರಾಜ ಬೇಗೂರ, ದೊಡ್ಡಶಪ್ಪ ಬೇಗೂರ, ಮಹದೇವಪ್ಪ ಬಂದನ್ನವರ, ಮಾಂತೇಶ ಬೇಗೂರ ರೈತರ ಕಬ್ಬು ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.