BREAKING: ಪೆಟ್ರೋಲ್, ಡೀಸೆಲ್ ದರ ₹2 ಇಳಿಕೆ

ನವದೆಹಲಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ₹2 ಇಳಿಕೆ ಮಾಡಿದೆ. ಬೆಲೆ ಇಳಿಕೆಯನ್ನು ಇಂಧನ ಸಚಿವಾಲಯ ಖಚಿತಪಡಿಸಿದೆ. ಈ ಪರಿಷ್ಕೃತ ದರವು ನಾಳೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಜಾರಿ ಆಗಲಿದೆ.
ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡುಗೆ ಅನಿಲ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 100 ರೂ.ಗಳಷ್ಟು ಕಡಿತಗೊಳಿಸಿರುವುದಾಗಿ ಘೋಷಿಸಿದ್ದರು.