ಡಿಕೆಶಿ ಮನೆ ಮುಂದೆ ಪ್ರೊಟೆಸ್ಟ್ : ಪ್ರತಿಭಟನಾಕಾರರ ಮೇಲೆ ಎಫ್ ಐಆರ್

ಡಿಕೆಶಿ ಮನೆ ಮುಂದೆ ಪ್ರೊಟೆಸ್ಟ್ : ಪ್ರತಿಭಟನಾಕಾರರ ಮೇಲೆ ಎಫ್ ಐಆರ್

ಬೆಂಗಳೂರು:ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆ ಮುಂದೆ ಪ್ರತಿಭಟನೆ ಮಾಡಿದವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಪೊಲೀಸ್ರು ಸುಮೋಟೋ ಕೇಸ್ ದಾಖಲಿಸಿಕೊಂಡು ಎಫ್ ಐ ಆರ್ ಮಾಡಿದ್ದಾರೆ. ಫೆ. 14 ರಂದು ಗೋವಾ ಪ್ರನಾಳಿಕೆ ಕುರಿತು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಗೋವಾ ಚುನಾವಣಾ ಪ್ರಣಾಳಿಕೆಯಲ್ಲಿ ಮಹಾದಾಯಿ ನೀರನ್ನ ಕರ್ನಾಟಕ್ಕೆ ಬಿಡದ ಕುರಿತು ಉಲ್ಲೇಖ ಹಿನ್ನೆಲೆ ಡಿಕೆಶಿ ಮನೆ ಮುಂದೆ ಪ್ರತಿಭಟನೆ ಮಾಡಿದ್ದರು. ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರು , ನಾಗಮಂಗಲದ ಕುಮಾರ್ ,ಕೆ,ಎನ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಗೆ ಅನುಮತಿ ಇಲ್ಲದೇ ಕಾಂಗ್ರೆಸ್ ನಾಯಕರ ಮನೆ ಮುಂದೆ ಏಕಾಏಕಿ ಪ್ರತಿ ಭಟನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ಮೇಲೆ ಸದಾಶಿವನಗರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.