ರಸ್ತೆ ಅಪಘಾತ: ಮಾಜಿ ಮಿಸ್ ಕೇರಳ ಅನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಬಲಿ

ಕೊಚ್ಚಿ: ಎರ್ನಾಕುಲಂನ ವೈಟ್ಟಿಲಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಾಜಿ ಮಿಸ್ ಕೇರಳ ಆನ್ಸಿ ಕಬೀರ್ ಮತ್ತು ರನ್ನರ್ ಅಪ್ ಅಂಜನಾ ಶಾಜನ್ ಮೃತಪಟ್ಟಿದ್ದಾರೆ. 2019 ರ ಸೌಂದರ್ಯ ಸ್ಪರ್ಧೆಯಲ್ಲಿ ಅನ್ಸಿ ಮತ್ತು ಅಂಜನಾ ವಿಜೇತರು ಮತ್ತು ರನ್ನರ್ ಅಪ್ ಮಿಂಚಿದ್ದರು. ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದ ವೇಳೆ ಕಾರು ಅಪಘಾತಕ್ಕೀಡಾಗಿದೆ. 25 ವರ್ಷದ ಅನ್ಸಿ ತಿರುವನಂತಪುರಂನ ಅಲಂಕೋಡ್ ಹಾಗೂ 26 ವರ್ಷದ ಅಂಜನಾ ತ್ರಿಶೂರ್ ಮೂಲದವರು.