ದಕ್ಷಿಣ ಕೊರಿಯಾ ಕೊರೊನಾ ಸ್ಫೋಟ- 24 ಗಂಟೆಗಳಲ್ಲಿ 3.8 ಲಕ್ಷ ಜನರಿಗೆ ಸೋಂಕು ದೃಢ

ಸಿಯೋಲ್: ದಕ್ಷಿಣ ಕೊರಿಯಾ ಹೆಮ್ಮಾರಿ ಕೊರೊನಾ ವೈರಸ್ ಸ್ಫೋಟಗೊಂಡಿದೆ. 'ಕಳೆದ 24 ಗಂಟೆಗಳಲ್ಲಿ ದೇಶದ 3,83,665 ಜನರಿಗೆ ಸೋಂಕು ದೃಢಪಟ್ಟಿದೆ' ಎಂದು ದಕ್ಷಿಣ ಕೊರಿಯಾದ ಆರೋಗ್ಯ ಅಧಿಕಾರಿಗಳು ಶನಿವಾರ ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಈವರೆಗೂ ದಾಖಲಾದ ದೈನಂದಿನ ಕೊರೊನಾ ವರದಿಯಲ್ಲಿ ಇದು ಗರಿಷ್ಠ ಸಂಖ್ಯೆಯಾಗಿದೆ. ದಕ್ಷಿಣ ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಏಜೆನ್ಸಿ (ಕೆಡಿಸಿಎ) ಪ್ರಕಾರ, ಜಿಯೊಂಗ್ಗಿ ಪ್ರಾಂತ್ಯವು 1,07,943 ಸೋಂಕುಗಳನ್ನು ವರದಿ ಮಾಡಿದೆ. ಆದರೆ ರಾಜಧಾನಿ ಸಿಯೋಲ್‌ನಲ್ಲಿ 80,437 ಪ್ರಕರಣಗಳು ದಾಖಲಾಗಿವೆ. ಅದೇ ಅವಧಿಯಲ್ಲಿ 269 ಸಾವುಗಳು ವರದಿಯಾಗಿವೆ ಎಂದು ಕೆಡಿಸಿಎ ತಿಳಿಸಿದೆ.