ಬ್ರೇಕಿಂಗ್: ಪಾವಗಡದ ಪಳವಳ್ಳಿ ಬಳಿ ಬಸ್ ಉರುಳಿ 8 ಜನ ದುರ್ಮರಣ

ಬ್ರೇಕಿಂಗ್: ಪಾವಗಡದ ಪಳವಳ್ಳಿ ಬಳಿ ಬಸ್ ಉರುಳಿ 8 ಜನ ದುರ್ಮರಣ

ಪಾವಗಡ: ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದ ಪರಿಣಾಮ 8 ಜನ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಈ ಭೀಕರ ಅಪಘಾತ ನಡೆದಿದೆ. ಇನ್ನು 25ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ರಕ್ಷಣಾ ಕಾರ್ಯ ನಡೆದಿದೆ. ಖಾಸಗಿ ಬಸ್ ಇದಾಗಿದ್ದು ವೈ.ಎನ್ ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿತ್ತು. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.