ಭಾರತ್ ಬಯೋಟೆಕ್​ನಿಂದ ವಿಶ್ವದ ಮೊದಲ ನಾಸಲ್ ಕೋವಿಡ್ ಲಸಿಕೆಗೆ ಅನುಮೋದನೆ

ಭಾರತ್ ಬಯೋಟೆಕ್​ನಿಂದ ವಿಶ್ವದ ಮೊದಲ ನಾಸಲ್ ಕೋವಿಡ್ ಲಸಿಕೆಗೆ ಅನುಮೋದನೆ

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಮೂಗಿನ ಮೂಲಕ ನೀಡಲಾಗುವ ಕೋವಿಡ್ ಲಸಿಕೆಗೆ ಅನುಮೋದನೆ ಸಿಕ್ಕಿದೆ. ಈ ಲಸಿಕೆಯ ಪರಿಣಾಮಕಾರಿತ್ವದ ದತ್ತಾಂಶಗಳನ್ನು ಬಿಡುಗಡೆ ಮಾಡಿಲ್ಲ. 

ಭಾರತ್ ಬಯೋಟೆಕ್‌ನ ಸೂಜಿ-ಮುಕ್ತ ಇಂಟ್ರಾನಾಸಲ್ ಕೋವಿಡ್ ಲಸಿಕೆಯನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮತಿ ನೀಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಲಸಿಕೆಗೆ ಪ್ರಾಥಮಿಕ ಸರಣಿ ಮತ್ತು ಭಿನ್ನರೂಪದ ಬೂಸ್ಟರ್ ಆಗಿ ಬಳಸಲು ತನ್ನ ಒಪ್ಪಿಗೆ ನೀಡಿದೆ. 

ಇಂಟ್ರಾನಾಸಲ್ ಲಸಿಕೆ iNCOVACC ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಸುರಕ್ಷಿತವಾಗಿದೆ ಎಂದು ಸಾಬೀತಾಗಿದೆ. ಲಸಿಕೆಯನ್ನು ಪ್ರಾಥಮಿಕ ಡೋಸ್ ಮತ್ತು ಹೆಟೆರೊಲಾಜಸ್ ಬೂಸ್ಟರ್ ಡೋಸ್ ಆಗಿ ಪರೀಕ್ಷಿಸಲಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಇನ್ನೂ ಯಾವುದೇ ಪರಿಣಾಮಕಾರಿತ್ವದ ಡೇಟಾವನ್ನು ಒದಗಿಸಲಾಗಿಲ್ಲ. iNCOVACC ವಿಶ್ವದ ಮೊದಲ ಇಂಟ್ರಾನಾಸಲ್ ಲಸಿಕೆಯಾಗಲಿದೆ.