ಇಂದಿನಿಂದ ಅಧಿಕೃತವಾಗಿ SIR ಪ್ರಕ್ರಿಯೆ ಆರಂಭ!
ಬೆಂಗಳೂರು : ಇಂದಿನಿಂದ ಅಧಿಕೃತವಾಗಿ SIR ಜಾರಿ ಆಗಿದ್ದು BLOಗಳು ಮನೆಮನೆಗೆ ಭೇಟಿ ನೀಡಲಿದ್ದಾರೆ. ಇಂದಿನಿಂದ ಜುಲೈ 29 ರವರೆಗೆ ಮನೆ ಮನೆಗೆ ಭೇಟಿ ನಿಗದಿ ಪಡಿಸಲಾಗಿದೆ. ಡ್ರಾಫ್ಟ್ ರೋಲ್ ಆಗಸ್ಟ್ 5ರಂದು ಪ್ರಕಟ ಮಾಡಲಾಗುತ್ತೆ. 2002ರ ಮತದಾರರ ಪಟ್ಟಿಗೆ 2025ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಲಾಗಿದೆ.
ಇದರಲ್ಲಿ ಶೇಕಡಾ 76.32ರಷ್ಟು ಪ್ರಗತಿ ಸಾಧಿಸಿದೆ . ಸದ್ಯ ಬೆಂಗಳೂರು ವ್ಯಾಪ್ತಿಯಲ್ಲಿ 28 ಮತದಾರರ ನೋಂದಣಾಧಿಕಾರಿ 75 ಸಹಾಯಕ ಮತದಾರ ನೋಂದಣಾಧಿಕಾರಿ 905 BLO ಸೂಪರ್ ವೈಸರ್ ಮತ್ತು 8972 BLO ಕಾರ್ಯ ನಿರ್ವಹಣೆ ಮಾಡ್ತಾರೆ . ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ 16 ಸಾವಿರದ 505 BLA -2 ನೇಮಕ ಮಾಡಲಾಗಿದೆ.