ನ್ಯೂ ಯಿಯರ್ ನಿಂದ ATM ಸೇವೆ ದುಬಾರಿ

ನ್ಯೂ ಯಿಯರ್ ನಿಂದ ATM ಸೇವೆ ದುಬಾರಿ

ನವದೆಹಲಿ: 2022 ರಜನವರಿಯಿಂದ ತಮ್ಮ ಖಾತೆ ಹೊಂದಿರುವ ಬ್ಯಾಂಕ್ ಗಳ ಎಟಿಎಂಗಳಿಂದ ಹಣ ಹಿಂಪಡೆಯುವ ಮಿತಿ ಮುಗಿದ ನಂತರ, ಇತರೆ ಎಟಿಎಂನಿಂದ ಹಣ ನಗದೀಕರಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಎಟಿಎಂ ಯಂತ್ರ ಸ್ಥಾಪನೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಕಾರಣ ಎಟಿಎಂ ಇಂಟರ್ ಚೇಂಜ್ ಶುಲ್ಕ ಹೆಚ್ಚಳಕ್ಕೆ ಆರ್ ಬಿಐ ಈ ವರ್ಷ ಮಧ್ಯಭಾಗದಲ್ಲಿ ಸಮ್ಮತಿ ಸೂಚಿಸಿತ್ತು. ಇದರಂತೆ, ಆ.1ರಿಂದ ಪ್ರತಿ ವಹಿವಾಟಿನ ಶುಲ್ಕ 15ರಿಂದ 17 ರೂ.ಗೆ ಏರಿಕೆ ಆಗಿದೆ. ಇದಲ್ಲದೆ, ಹಣಕಾಸೇತರ ವಹಿವಾಟಿನ ಶುಲ್ಕ 5ರಿಂದ 6 ರೂ.ಗೆ ಏರಿಕೆ ಆಗಿದೆ. ಅನ್ಯ ಬ್ಯಾಂಕ್ ಎಟಿಎಂನಲ್ಲಿ ಕಾರ್ಡ್ ಬಳಕೆ ಆಗಿದ್ದಕ್ಕೆ ವಿಧಿಸುವ ಶುಲ್ಕ ಇದಾಗಿದೆ. ಗ್ರಾಹಕರಿಗೆ ನಿಶ್ಚಿತ ಸಂಖ್ಯೆಯ ಉಚಿತ ವಹಿವಾಟಿಗೆ ಅವಕಾಶ ಇದ್ದು, ಇದಾದ ಬಳಿಕ ಪ್ರತಿ ವಹಿವಾಟಿಗೆ ಗ್ರಾಹಕರು 20 ರೂ. ಬ್ಯಾಂಕಿಗೆ ಪಾವತಿಸಬೇಕಾಗಿದೆ.