ಬೆಂಗಳೂರು: ಶೇ 100ರಷ್ಟು ಹೆಚ್ಚಾಯ್ತು ಶಾಸಕರು ಸಚಿವರ ವೇತನ..!

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಸಾಕಷ್ಟು ರೀತಿಯ ಪ್ರಯತ್ನಗಳನ್ನ ಮಾಡುತ್ತಿರುವ ಬೆನ್ನಲ್ಲೇ ಶಾಸಕರು ಮತ್ತು ಸಚಿವರು ವೇತನ ಭತ್ಯೆ ಹೆಚ್ಚಳ ಮಾಡುವ ಸಂಬಂಧ ತಿದ್ದುಪಡೆ ಮಂಡಿಸಲು ರಾಜ್ಯಪಾಲರ ಅನುಮತಿ ಪಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.
ಈ ಒಂದು ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, , ಸಿಎಂ, ಸಚಿವರು, ಶಾಸಕರು, ಸಭಾಪತಿ, ಸಭಾಧ್ಯಕ್ಷರಿಗೆ ಭರ್ಜರಿ ವೇತನ ಹೆಚ್ಚಳ ವಾಗಲಿದೆ. ಜನಪ್ರತಿನಿಧಿಗಳ ವೇತನ ಭತ್ಯೆ ಯಾವ ಪ್ರಮಾಣದಲ್ಲಿ ಹೆಚ್ಚಳ ಆಗಿದೆ ಅಂತ ನೋಡುವುದಾದರೆ.
ಸಂಬಳ ಎಷ್ಟು ಹೆಚ್ಚಳ?
* ಸಿಎಂ – 75,000 ದಿಂದ 1,50,000 ರೂ.
* ಸಚಿವರು – 60,000 ದಿಂದ 1.25 ಲಕ್ಷ ರೂ.
* ಶಾಸಕರು – 40,000 ದಿಂದ 80,000 ರೂ.
* ಸ್ಪೀಕರ್ – 75,000 ದಿಂದ 1.25 ಲಕ್ಷ ರೂ.
* ಸಭಾಪತಿ – 75,000 ದಿಂದ 1.25 ಲಕ್ಷ ರೂ.
* ಸಿಎಂ, ಸಚಿವರ ಆತಿಥ್ಯ ಭತ್ಯೆ – 4.50 ಲಕ್ಷದಿಂದ 5 ಲಕ್ಷ ರೂ.
* ಸಚಿವರ ಮನೆ ಬಾಡಿಗೆ ಭತ್ಯೆ – 1.20 ಲಕ್ಷದಿಂದ 2.50 ಲಕ್ಷ ರೂ.
* ಪಿಂಚಣಿ – 50,000 ದಿಂದ 75,000 ರೂ.
* ಹೆಚ್ಚುವರಿ ಪಿಂಚಣಿ – 5,000 ರಿಂದ 20,000 ರೂ