BIG BREAKING: ಹಿಜಾಬ್ ವಿವಾದ; ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಹೈಕೋರ್ಟ್

ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೇಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ರಾಜ್ಯದಲ್ಲಿ ಹಿಜಾಬ್ ವಿವಾದವು ಗಲಭೆ, ಪ್ರತಿಭಟನೆಯ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ಹಿಜಾಬ್ ವಿವಾದ ಸಂಬಂಧ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ಹಿಜಾಬ್ ಪರ-ವಿರೋಧ ವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30 ಮುಂದೂಡಿದೆ. ಧರ್ಮ ಪಾಲನೆ ಜನರ ಮೂಲಭೂತ ಹಕ್ಕು, ಸರ್ಕಾರ ಧಾರ್ಮಿಕ ಆಚರಣೆ ನಿರ್ಧರಿಸಲು ಆಗಲ್ಲ. ಹಿಜಾಬ್ ಕೂದಲು ಕುತ್ತಿಗೆ ಮುಚ್ಚಬೇಕು. ಕೈ, ಮುಖ ಬಿಟ್ಟು ಉಳಿದುದನ್ನು ಅಪರಿಚಿತರಿಗೆ ತೋರಿಸಬಾರದು ಎಂದು ಕುರಾನ್‌ನಲ್ಲಿ ಉಲ್ಲೇಖವಾಗಿದೆ ಎಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಹೈಕೋರ್ಟ್‌ಗೆ ತಿಳಿಸಿದರು. ಮುಸ್ಲಿಂರಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯಾದರೆ ಶಿಕ್ಷೆಯಿದೆ, ಹದೀಸ್‌ನಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆ ಬಗ್ಗೆ ಉಲ್ಲೇಖ ಆಗಿದೆ. ಸಡಿಲವಾದ ಮತ್ತು ಉದ್ದಯನೆಯ ಬಟ್ಟೆಯನ್ನು ತೊಡಬೇಕು ಎಂದು ಉಲ್ಲೇಖಿಸಲಾಗಿದೆ. ಧರ್ಮಾನುಸಾರ ವಸ್ತ್ರ ಧರಿಸುವುದು ಮೂಲಭೂತ ಹಕ್ಕು, ಕೇರಳ ಹೈಕೋರ್ಟ್ ಈ ಹಕ್ಕನ್ನು ಗುರುತಿಸಿದೆ ಎಂದು ವಕೀಲ ದೇವದತ್ ಕಾಮತ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.