ನವದೆಹಲಿ : ಸೆ.10ರಂದು ಎಲ್ಲಾ ರಾಜ್ಯಗಳ ಸಿಇಒಗಳ ಸಭೆ ಕರೆದ ಚುನಾವಣಾ ಆಯೋಗ

ನವದೆಹಲಿ : ಚುನಾವಣಾ ಆಯೋಗವು ರಾಷ್ಟ್ರವ್ಯಾಪಿ SIR ಕುರಿತು ಚರ್ಚಿಸಲು ಸೆಪ್ಟೆಂಬರ್ 10ರಂದು ಸಿಇಒಗಳ ಸಭೆ ನಡೆಸಲಿದೆ.
ಮತದಾರರ ಪಟ್ಟಿಯ ರಾಷ್ಟ್ರವ್ಯಾಪಿ ವಿಶೇಷ ತೀವ್ರ ಪರಿಷ್ಕರಣೆ (SIR) ಕಡೆಗೆ ಮೊದಲ ಹೆಜ್ಜೆ ಇಡುತ್ತಿರುವ ಆಯೋಗವು, ಸನ್ನದ್ಧತೆಯನ್ನು ಪರಿಶೀಲಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ (CEO) ಸಭೆ ನಡೆಸಲು ಸಿದ್ಧವಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
2026ರ ಜನವರಿ 1ರಂದು ಅರ್ಹತಾ ದಿನಾಂಕ ನಿಗದಿಪಡಿಸಿ ದೇಶಾದ್ಯಂತ SIR ಪ್ರಕ್ರಿಯೆ ಪ್ರಾರಂಭಿಸುವ ಸಾಧ್ಯತೆಯಿದೆ. ಜೂನ್ 24ರಂದು ಹೊರಡಿಸಿದ ಆದೇಶದಲ್ಲಿ, ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನವೇ ವಿಶೇಷ ಪರಿಷ್ಕರಣೆ ನಡೆಸಲಾಗಿತ್ತು. ಉಳಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಕ್ತ ಸಮಯದಲ್ಲಿ ಆದೇಶಗಳನ್ನು ಹೊರಡಿಸಲಾಗುವುದು ಎಂದು ಆಯೋಗ ತಿಳಿಸಿದೆ.