ಹೊಸ ಫೋಟೋ ರಿಲೀಸ್ ಮಾಡಿ ಬಿಗ್ ಅಪ್‌ಡೇಟ್ ನೀಡಿದ ಇಸ್ರೋ - 5ನೇ ಕಕ್ಷೆಯನ್ನು ಪೂರ್ಣಗೊಳಿಸಿದ ಚಂದ್ರಯಾನ - 3

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ದೇಶ ವಾಸಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. ಚಂದ್ರಯಾನ - 3 ಮಿಷನ್ ಪ್ರಯಾಣದ ಬಗ್ಗೆ ಹೊಸ ಅಪ್‌ಡೇಟ್ ಶೇರ್ ಮಾಡಿದೆ.
ಭೂಮಿಯಿಂದ ಸ್ಪೇಸ್ಕ್ರಾಫ್ಟ್ ತನ್ನ 5ನೇ ಮತ್ತು ಅಂತಿಮ ಕಕ್ಷೆಯನ್ನು ಪೂರ್ಣಗೊಳಿಸಿದೆ. ಇನ್ನೇನಿದ್ದರೂ ಮುಂದಿನ ಹಂತವು ಭೂಮಿಯಿಂದ ಚಂದ್ರನ ಪಥಕ್ಕೆ ಬದಲಾಗುವುದು. ಅಲ್ಲಿ ಚಂದ್ರನ ಗುರುತ್ವಾಕರ್ಷಣೆಯು ಅಂತಿಮವಾಗಿ ಅದನ್ನು ಚಂದ್ರನ ಕಕ್ಷೆಯ ಎಡೆಗೆ ಎಳೆಯುತ್ತದೆ. ನಂತರ ಕೊನೆಯದಾಗಿ ಚಂದ್ರನ ಮೇಲ್ಮೈನಲ್ಲಿ ಬಾಹ್ಯಾಕಾಶ ನೌಕೆ ಲಾಂಡ್ ಆಗುತ್ತದೆ. ಇದಕ್ಕೆ ಇನ್ನಷ್ಟು ದಿನಗಳು ಬೇಕಾಗಲಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಇಸ್ರೋ ತಿಳಿಸಿದೆ.