ಚಿಕ್ಕೋಡಿ: ರಸ್ತೆಯ ಮೇಲೆ ಪ್ರತ್ಯಕ್ಷವಾದ ಮೊಸಳೆ

ಚಿಕ್ಕೋಡಿ: ರಸ್ತೆಯ ಮೇಲೆ ಆಕಸ್ಮಿಕವಾಗಿ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆಯೊಂದು, ಬೆಳಗಾವಿ ಜಿಲ್ಲೆಯ ಅಥಣಿ, ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನಡೆದಿದೆ. ಹಳ್ಯಾಳ ಗ್ರಾಮದಲ್ಲಿ ಮೊಸಳೆಯೊಂದು ರಸ್ತೆಯ ಮೇಲೆ ಓಡಾಡುತ್ತಿರುವ ದೃಶ್ಯವೊಂದನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ರಸ್ತೆಯ ಮೇಲೆ ಹಾಯ್ದು ಕಬ್ಬಿನ ಗದ್ದೆಯ ಒಳಗಡೆ ಮೊಸಳೆ ಹೋಗಿದೆ. ಹೀಗಾಗಿ ಹಳ್ಯಾಳ ಗ್ರಾಮಸ್ಥರು ಭಯಭೀತರಾಗಿದ್ದು, ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ಮೊಸಳೆ ಬಗ್ಗೆ ಮಾಹಿತಿ ತಿಳಿಸಿದ್ದಾರೆ.