ಬ್ರೇಕಿಂಗ್ : ಸಿಎಸ್ ಕೆ ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಟ್ಟ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿದ್ದಾರೆ. ಸದ್ಯ ಈ ಸಿಎಸ್ ಕೆ ತಂಡಕ್ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ನಾಯಕತ್ವ ವಹಿಸಲಿದ್ದಾರೆ. ಐಪಿಎಲ್ ಮೊದಲ ಆವೃತ್ತಿಯಿಂದಲೂ ಚೆನ್ನೈ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದ ಧೋನಿ 2010,2011,2018 ಮತ್ತು 2021 ರಲ್ಲಿ ಚಾಂಪಿಯನ್ ಮಾಡಿದ್ದರು. 15 ಆವೃತ್ತಿಗೆ ಕ್ಷಣಗಣ ಆರಂಭವಾದ ಬೆನ್ನಲ್ಲೇ ಧೋನಿ ನಡೆ ಅಭಿಮಾನಿಗಳಿಗೆ ಬೇಸರ ತಂದಿದೆ.