ಖ್ಯಾತ ಟಾಲಿವುಡ್ ನಟ ಪೊಸಾನಿ ಕೃಷ್ಣ ಅರೆಸ್ಟ್..! -

ಖ್ಯಾತ ಟಾಲಿವುಡ್ ನಟ ಪೊಸಾನಿ ಕೃಷ್ಣ ಅರೆಸ್ಟ್..! -

ಹೈದರಾಬಾದ್‌ : ಟಾಲಿವುಡ್ ಖ್ಯಾತ ನಟ ಪೊಸಾನಿ ಕೃಷ್ಣ ಮುರಳಿ ಅವರನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ ರಾಯದುರ್ಗದ ಮೈಹೋಮ್ ಅಪಾರ್ಟ್‌ಮೆಂಟ್‌ ನಲ್ಲಿದ್ದ ನಟನನ್ನು ಪೊಲೀಸರು ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. 

 

ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅನಂತಪುರದ ಓಬುಲುವರಿಪಲ್ಲಿಯಲ್ಲಿ ಪೊಸಾನಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆಯೂ ಕೂಡ ಈ ನಟನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 

ಆದ್ರೆ ಇದೀಗ ನಟ ರಾಜಕೀಯದಿಂದ ಸಂಪೂರ್ಣವಾಗಿ ದೂರವಿದ್ದರೂ, ಅನಂತಪುರ ಪೊಲೀಸರು ಅವರನ್ನು ಬಂಧಿಸಿದ್ದಾರೆ.