ದೆಹಲಿಯ ರೈಲ್ವೆ ಗೋದಾಮಿಗೆ ಬೆಂಕಿ- ಅಗ್ನಿಯ ಕೆನ್ನಾಲಿಗೆ ಬೆಚ್ಚಿಬಿದ್ದ ಜನ.!

ನವದೆಹಲಿ: ದೆಹಲಿಯ ಸಬ್ಜಿ ಮಂಡಿ ರೈಲು ನಿಲ್ದಾಣದ ಗೋಡೌನ್‌ನಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಒಟ್ಟು 14 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿವೆ. ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ನಿಲ್ದಾಣದಲ್ಲಿ ರೈಲುಗಳು ಇದ್ದುದನ್ನು ಕಾಣುತ್ತದೆ. ಆದರೆ ಯಾವುದೇ ರೈಲಿಗೆ ಬೆಂಕಿ ತಗುಲಿಲ್ಲ ಹಾಗೂ ಪ್ರಾಣಹಾನಿ ಸಂಭವಿಸಿಲ್ಲ.