ರಾಷ್ಟ್ರಪತಿ ಮುರ್ಮುರನ್ನು ಭೇಟಿಯಾದ ಎಚ್.ಡಿ.ದೇವೇಗೌಡ

ರಾಷ್ಟ್ರಪತಿ ಮುರ್ಮುರನ್ನು ಭೇಟಿಯಾದ ಎಚ್.ಡಿ.ದೇವೇಗೌಡ

ನವದೆಹಲಿ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. 

ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರು ದೆಹಲಿಗೆ ತೆರಳಿದ್ದಾರೆ. ಬಿಡುವಿನ ವೇಳೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. 

ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ದೇವೇಗೌಡರ ವಿಶ್ರಾಂತಿಯಲ್ಲಿದ್ದರು. ಹೀಗಾಗಿ ರಾಷ್ಟ್ರಪತಿ ಮುರ್ಮು ಅವರು ದೇವೇಗೌಡರ ಆರೋಗ್ಯವನ್ನು ವಿಚಾರಿಸಿದ್ದಾರೆ. 

ಎನ್ಡಿಎ ಒಕ್ಕೂಟವು ರಾಷ್ಟ್ರಪತಿಗಳ ಚುನಾವಣೆ ವೇಳೆ ಮುರ್ಮು ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಈ ವೇಳೆ ಮುರ್ಮು ಅವರಿಗೆ ದೇವೇಗೌಡರು ಬೆಂಬಲ ಸೂಚಿಸಿ ಶುಭ ಕೋರಿದ್ದರು.