ಹುಬ್ಬಳ್ಳಿ: ಅಪಾಯಕ್ಕೆ ಆಹ್ವಾನಿಸುವ ಪಾಲಿಕೆ ಕಟ್ಟಡ: ಅಪಘಾತಕ್ಕೆ ಮುನ್ನವೇ ಎಚ್ಚೇತ್ತುಕೊಂಡ ಪಾಲಿಕೆ...!

ಹುಬ್ಬಳ್ಳಿ: ಅಪಾಯಕ್ಕೆ ಆಹ್ವಾನಿಸುವ ಪಾಲಿಕೆ ಕಟ್ಟಡ: ಅಪಘಾತಕ್ಕೆ ಮುನ್ನವೇ ಎಚ್ಚೇತ್ತುಕೊಂಡ ಪಾಲಿಕೆ...!

ಹುಬ್ಬಳ್ಳಿ: ಬೆಂಗಳೂರು, ಧಾರವಾಡದಲ್ಲಿ ಬೃಹತ್ ಕಟ್ಟಡ ಕುಸಿದ ಘಟನೆಗಳು ನಡೆದ ಬೆನ್ನೆಲ್ಲೆ ಎಚ್ಚೆತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು‌,‌ ನಗರದಲ್ಲಿರುವ ಶಿಥಿಲಾವಸ್ಥೆಯ ವಾಣಿಜ್ಯ ಮಳಿಗೆಯನ್ನು ಗುರುತಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜನ ಸಂಚಾರ ಕಡಿಮೆ ಮಾಡಲು ಅಂಗಡಿಗಳ ಮುಂದೆ ಬ್ಯಾರಿಕೇಡ್ ಅಳವಡಿಸಿದೆ. ಈ ಕಟ್ಟಡವನ್ನು ತ್ವರಿತವಾಗಿ ತೆರವುಗೊಳಿಸಬೇಕೆಂದು ಎಂಜಿನಿಯರ್ ಗಳು ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ ಬ್ರಾಡವೇ ದಲ್ಲಿರುವ ಪಾಲಿಕೆ ವಾಣಿಜ್ಯ ಮಳಿಗೆ 60 ವರ್ಷಗಳ ಹಳೆಯದ್ದಾಗಿದೆ. ಇದು ಯಾವುದೇ ಕ್ಷಣದಲ್ಲಿ ಕುಸಿಯುವ ಅಪಾಯದಲ್ಲಿದೆ.‌ ಜನನಿಬಿಡ ಪ್ರದೇಶದಲ್ಲಿರುವ ಈ ಮಳಿಗೆ ಹಠಾತ್ ಕುಸಿದರೆ ಸಾವು ನೋವುಗಳು ಸಂಭವಿಸುವ ಅಪಾಯದ ಸಂದಿಗ್ಧತೆ ಎದುರಾಗಿದೆ. ಹಾಗಾಗಿ ಪಾಲಿಕೆಯ ಸುಪರಿಟೆಂಡೆಂಟ್ ಎಂಜಿನಿಯರ್ ಟಿ ತಿಮ್ಮಪ್ಪ‌ ನೇತೃತ್ವದ ಎಂಜಿನಿಯರ್ ಗಳ ತಂಡ ಮತ್ತೊಮ್ಮೆ ಖುದ್ದು ಪರಿಶೀಲಿಸಿ, ಕಟ್ಟಡದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಶಿಫಾರಸು ಮಾಡಿದೆ. ಇಷ್ಟೇ ಅಲ್ಲದೇ ಎಸ್ ಡಿಎಂ ಸಿವಿಲ್ ಎಂಜಿನಿಯರಿಂಗ್ ವಿಭಾಗದ ತಂಡ ಸಹ ವಾಣಿಜ್ಯ ಮಳಿಗೆ ಪರಿಶೀಲಿಸಿ ಯಾವುದೇ ಸಂದರ್ಭದಲ್ಲಿ ಕುಸಿಯಬಹುದಾಗಿದೆ ಎಂದೂ ಪಾಲಿಕೆಗೆ ವರದಿ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಅವರು, ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಅಂಗಡಿಗಳನ್ನು ತೆರವು ಗೊಳಿಸುವಂತೆ ಮೂರನೇ ಮತ್ತು ಅಂತೀಮ ನೋಟಿಸ್ ನ್ನು ಶುಕ್ರವಾರ (ಅ.01)ಸಂಜೆ ಅಂಗಡಿಕಾರರಿಗೆ ನೀಡಿದ್ದಾರೆ. ಅಲ್ಲದೇ ಕಟ್ಟಡ ಕುಸಿದು ಪ್ರಾಣಾಪಾಯ ಉಂಟಾದಲ್ಲಿ ತಾವೇ ಜವಾಬ್ದಾರಾಗುತ್ತೀರಿ ಎಂದೂ ಎಚ್ಚರಿಸಿದ್ದಾರೆ. ವಲಯ ಕಚೇರಿ ನಂ 9 ರ ವ್ಯಾಪ್ತಿಯಲ್ಲಿರುವ ಟೌನ್ ಪೊಲೀಸ್ ಠಾಣೆ ಎದುರಿಗೆ ಇರುವ ಮೂರು‌ ಅಂತಸ್ತಿನ ಅ ವಾಣಿಜ್ಯ ಕಟ್ಟಡವನ್ನು ಪಾಲಿಕೆಯು 60 ವರ್ಷಗಳ ಹಿಂದೆಯೇ ನಿರ್ಮಿಸಿದೆ. ಮೊದಲನೇ ಹಾಗೂ ಎರಡನೇ ಮಹಡಿಯ ಕಬ್ಬಿಣದ ಸರಳುಗಳು ತುಕ್ಕುಹಿಡಿದು ಹಾಳಾಗಿದ್ದು ಬಾಳಿಕೆ (ಸ್ಥಿರತೆ) ಕಳೆದುಕೊಂಡಿದೆ . ಅಲ್ಲದೇ ಛಾವಣಿಯ ಭಾಗವು ನೇತಾಡುವ ಸ್ಥಿತಿಯಲ್ಲಿದೆ. ಈ ಛಾವಣಿಗಳು ಯಾವುದೇ ಬೀಳುವ ಸಂದರ್ಭವಿದೆ , ಈ ಎರಡೂ ಛಾವಣಿಗಳು ಕುಸಿದಲ್ಲಿ ನೆಲಮಹಡಿಯೂ ಸಹ ಹೆಚ್ಚಿನ ಅಪಾಯ ಉಂಟಾಗಿ ದುರ್ಘಟನೆಗೆ ಸಂಭವಿಸಬಹುದಾಗಿದೆ ಎಂದು ಎಂಜಿನಿಯರ್ ಗಳು ಎಚ್ಚರಿಸಿದ್ದಾರೆ.