ಇಂಡಿಯನ್‌ ಐಡಲ್‌ ಗಾಯಕ ಪವನ್‌ದೀಪ್ ಕಾರು ಅಪಘಾತ - ಗಂಭೀರ ಗಾಯ

ಇಂಡಿಯನ್‌ ಐಡಲ್‌ ಗಾಯಕ ಪವನ್‌ದೀಪ್ ಕಾರು ಅಪಘಾತ - ಗಂಭೀರ ಗಾಯ

ಅಹಮದಾಬಾದ್: 'ಇಂಡಿಯನ್‌ ಐಡಲ್‌' ಖ್ಯಾತಿಯ ಯುವ ಗಾಯಕ ಪವನ್‌ದೀಪ್ ರಾಜನ್ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಪರಿಣಾಮ ಪವನ್‌ದೀಪ್ ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಸದ್ಯ ಅವರನ್ನ ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಜರಾತ್‌ನ ಅಹಮದಾಬಾದ್ ಬಳಿ ಈ ಅಪಘಾತ ಸಂಭವಿಸಿದೆ. 

ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಬೆಳಗಿನ ಜಾವ 3.40ಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ಪವನ್‌ದೀಪ್‌ಗೆ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆ ವೈದ್ಯರ ಪ್ರಕಾರ, ಪವನ್‌ದೀಪ್ ಅವರ ಬಲಗಾಲು ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ.