INDvsENG 5th Test Match: ಭಾರತದ ಸ್ಪಿನ್ನರ್‌ಗಳ ಮ್ಯಾಜಿಕ್ - 218 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್

ಧರ್ಮಶಾಲಾ: ಭಾರತದ ಸ್ಪಿನ್ ಬೌಲರ್ ದಾಳಿಗೆ ಸಲುಗಿದ ಇಂಗ್ಲೆಂಡ್ ತಂಡವು 218 ರನ್‌ಗಳಿಗೆ ಆಲೌಟ್ ಆಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 57.4 ಓವರ್‌ಗಳಲ್ಲಿ 218 ರನ್ ಗಳಿಸಿ ಆಲೌಟ್‌ಗೆ ತುತ್ತಾಗಿದೆ. ಇಂಗ್ಲೆಂಡ್ ಪರ ಝಾಕ್ ಕ್ರಾಲಿ ಗರಿಷ್ಠ 79 ರನ್ ಗಳಿಸಿದರು. ಇನ್ನು ಭಾರತದ ಪರ ಕುಲದೀಪ್ ಯಾದವ್ 5 ವಿಕೆಟ್ ಹಾಗೂ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಉರುಳಿಸಿ ಮಿಂಚಿದರು. ಇನ್ನು ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡರು.