IPL 2024 | RR vs PBKS: ರಾಜಸ್ಥಾನ್‌ಗೆ 148 ರನ್‌ಗಳ ಗುರಿ ನೀಡಿದ ಪಂಜಾಬ್

IPL 2024 | RR vs PBKS: ರಾಜಸ್ಥಾನ್‌ಗೆ 148 ರನ್‌ಗಳ ಗುರಿ ನೀಡಿದ ಪಂಜಾಬ್

ಚಂಡೀಗಢ: ಪ್ರಮುಖ ಆಟಗಾರರ ಬ್ಯಾಟಿಂಗ್ ವೈಫಲ್ಯದ ನಡುವೆಯೂ ಪಂಜಾಬ್ ಕಿಂಗ್ಸ್‌ ತಂಡವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 148 ರನ್‌ಗಳ ಗುರಿ ನೀಡಿದೆ. 

ಐಪಿಎಲ್ 2024 ಭಾಗವಾಗಿ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮುಲ್ಲನ್‌ಪುರದಲ್ಲಿ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 8 ವಿಕೆಟ್‌ ನಷ್ಟಕ್ಕೆ 147 ರನ್ ಗಳಿಸಿದೆ. 

ಪಂಜಾಬ್ ಪರ ಅಶುತೋಷ್ ಶರ್ಮಾ ಗರಿಷ್ಠ 31 ರನ್‌ (16 ಎಸೆತ, 1 ಬೌಂಡರಿ, 3 ಸಿಕ್ಸ್), ಜಿತೇಶ್ ಶರ್ಮಾ 29 ರನ್‌ (24 ಎಸೆತ, 1 ಬೌಂಡರಿ, 2 ಸಿಕ್ಸ್), ಲಿಯಾಮ್ ಲಿವಿಂಗ್ಸ್ಟೋನ್ 21 ರನ್‌ ಗಳಿಸಿದರು. ಇನ್ನು ರಾಜಸ್ಥಾನ್ ಪರ ಅವೇಶ್ ಖಾನ್ ಹಾಗೂ ಕೇಶವ ಮಹಾರಾಜರು ತಲಾ 2 ಪಡೆದುಕೊಂಡರೆ, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್ ಹಾಗೂ ಯಜುವೇಂದ್ರ ಚಾಹಲ್ ತಲಾ 1 ವಿಕೆಟ್‌ ಉರುಳಿಸಿದರು.