IPL 2024 | RRvsLSG: ಕೆ.ಎಲ್.ರಾಹುಲ್, ಪೂರನ್ ಹೋರಾಟ ವ್ಯರ್ಥ - ರಾಜಸ್ಥಾನ್ ಗೆ 20 ರನ್‌ಗಳಿಂದ ಗೆಲುವು

ಜೈಪುರ: ನಾಯಕ ಕೆ.ಎಲ್. ರಾಹುಲ್ ಮತ್ತು ನಿಕೋಲಸ್ ಪೂರನ್ ಹೋರಾಟದ ನಡುವೆಯೂ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 20 ರನ್ ಗಳಿಂದ ಸೋಲು ಕಂಡಿದೆ.
ಐಪಿಎಲ್ 2024ರ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು. ತಂಡದ ಪರ ಸಂಜು ಸ್ಯಾಮ್ಸನ್ 82 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಉತ್ತರವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 173 ರನ್ ಗಳಿಸಲಷ್ಟೇ ಶಕ್ತವಾಯಿತು.
ಲಕ್ನೋ ಪರ ನಾಯಕ ರಾಹುಲ್ (58 ರನ್) ಮತ್ತು ನಿಕೋಲಸ್ ಪೂರನ್ (64 ರನ್) ತಲಾ ಅರ್ಧಶತಕ ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಕೊನೆಯ ಆರು ಎಸೆತಗಳಲ್ಲಿ ಲಕ್ನೋ ಗೆಲುವಿಗೆ 27 ರನ್‌ಗಳ ಅಗತ್ಯವಿತ್ತು. ಆದರೆ ತಂಡವು ಕೇವಲ ಆರು ರನ್ ಗಳಿಸಲು ಸಾಧ್ಯವಾಯಿತು. ಕಳೆದ ಸೀಸನ್ನಲ್ಲಿ ಲಕ್ನೋ ಪರ ಆಡಿದ್ದ ಅವೇಶ್ ಖಾನ್ ಕೇವಲ ಆರು ರನ್ ಬಿಟ್ಟುಕೊಟ್ಟು ರಾಜಸ್ಥಾನಕ್ಕೆ ಅಮೋಘ ಗೆಲುವು ತಂದುಕೊಟ್ಟರು.