ಬೆಂಗಳೂರಿನಲ್ಲೇ ಐಪಿಎಲ್ ಮೆಗಾ ಹರಾಜು- ಯಾವಾಗ ಗೊತ್ತಾ?

ಬೆಂಗಳೂರು: ಬಹು ನಿರೀಕ್ಷಿತ 2022ರ ಐಪಿಎಲ್ ಟೂರ್ನಿ ಆರಂಭಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಸಿಹಿ ಸುದ್ದಿಯೊಂದು ಹೊರಬಿದ್ದಿದ್ದು, ಮೆಗಾ ಹರಾಜು ಬೆಂಗಳೂರಿನಲ್ಲೇ ನಡೆಯಲಿದೆ. ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ಬೆಳಗ್ಗೆ 11 ಗಂಟೆಗೆ ಐಪಿಎಲ್ ಮೆಗಾ ಹರಾಜು ಆರಂಭವಾಗಲಿದೆ ಎಂದು ಆಯೋಜಕರು ಪ್ರಕಟಿಸಿದ್ದಾರೆ. ಎರಡು ದಿನಗಳ ಮೆಗಾ ಹರಾಜಿನಲ್ಲಿ ಒಟ್ಟು 590 ಕ್ರಿಕೆಟಿಗರು ಕಣಕ್ಕಿಳಿಯಲಿದ್ದಾರೆ. ಹರಾಜಿಗೆ ನೋಂದಾಯಿಸಿದ 590 ಆಟಗಾರರಲ್ಲಿ 228 ಕ್ಯಾಪ್ಡ್ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರು ಮತ್ತು ಏಳು ಅಸೋಸಿಯೇಟ್ ನೇಷನ್ಸ್‌ಗೆ ಸೇರಿದವರಿದ್ದಾರೆ.