ಮಂಡ್ಯ: ಕೃಷ್ಣರಾಜಸಾಗರಕ್ಕೆ 100 ಅಡಿ ನೀರು ಬಿಡುಗಡೆ - ರೈತರಲ್ಲಿ ಸಂತಸ

ಮಂಡ್ಯ: ಕೃಷ್ಣರಾಜಸಾಗರಕ್ಕೆ 100 ಅಡಿ ನೀರು ಬಿಡುಗಡೆ - ರೈತರಲ್ಲಿ ಸಂತಸ

ಮಂಡ್ಯ: ಕಾವೇರಿಯ ಉಗಮ ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರದ ನೀರಿನ ಮಟ್ಟ 100 ಅಡಿ ತಲುಪಿದೆ. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದ್ದು, ಕಾವೇರಿ ಜಲಾಶಯಕ್ಕೆ ಜೀವ ಕಳೆ ತಂದಿದೆ. 

ಮಂಗಳವಾರ ಬೆಳಿಗ್ಗೆ 48025 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ ಸೋಮವಾರ ಸಂಜೆ 97.50 ಅಡಿಗೆ ನೀರಿನ ಮಟ್ಟ ಹೆಚ್ಚಳವಾಗಿತ್ತು, ಮಂಗಳವಾರದ ಬೆಳಗ್ಗೆ ಬೆಳಿಗ್ಗೆ ವೇಳೆಗೆ ಜಲಾಶಯದಲ್ಲಿ ನೀರು 100 ಅಡಿಗೆ ತಲುಪಿದೆ. ಒಂದೇ ದಿನದಲ್ಲಿ 5 ಅಡಿ ನೀರು ಹರಿದುಬಂದಿದೆ. ಮುಂಗಾರು ವೈಫಲ್ಯದಿಂದ ನೀರಿಲ್ಲದೆ ಸೊರಗಿದ್ದ ಜಲಾಶಯದಲ್ಲಿ ಕಾವೇರಿ ಮೈದುಂಬಿಕೊಳ್ಳುತ್ತಿದೆ. ಜಲಾಶಯ ಭರ್ತಿಯಾಗುವ ಸಂತಸದಲ್ಲಿ ರೈತರಿದ್ದಾರೆ.