ಅಟೋ ಟಿಪ್ಪರ್ ವಾಹನ ಚಾಲಕರನ್ನು ಮರು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಸಚಿವ ಶಿವರಾಮ ಹೆಬ್ಬಾರಿಗೆ ಮನವಿ

ಹುಬ್ಬಳ್ಳಿ- ಕಾನೂನು ಬಾಹಿರವಾಗಿ ದಲಿತ ಜನಾಂಗದ ಅಟೋ ಟಿಪ್ಪರ್ ವಾಹನ ಚಾಲಕರನ್ನು ಪಾಲಿಕೆ ಆಯುಕ್ತರು ಕೆಲಸದಿಂದ ತೆಗೆದು ಹಾಕಿದ್ದಾರೆ ಈ ಕೂಡಲೇ ಮರು ಕೆಲಸಕ್ಕೆ ತೆಗೆದುಕೊಳ್ಳಲು ಒತ್ತಾಯಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘಗಳ ವತಿಯಿಂದ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯ ಗುಂಟ್ರಾಳ ಸೇರಿದಂತೆ ಸ್ಥಳೀಯರು ಪಾಲ್ಗೊಂಡಿದ್ದರು.