ಅಯೋಧ್ಯೆಯಲ್ಲಿ ನಿಖಿಲ್ ಹ್ಯಾಪಿ ಬರ್ತ್‌ಡೇ: ಕೇಕ್ ಕತ್ತರಿಸಿ ಮಾಜಿ ಪ್ರಧಾನಿಗೆ ತಿನ್ನಿಸಿದ ಮುದ್ದಿನ ಮೊಮ್ಮಗ

ಅಯೋಧ್ಯೆಯಲ್ಲಿ ನಿಖಿಲ್ ಹ್ಯಾಪಿ ಬರ್ತ್‌ಡೇ: ಕೇಕ್ ಕತ್ತರಿಸಿ ಮಾಜಿ ಪ್ರಧಾನಿಗೆ ತಿನ್ನಿಸಿದ ಮುದ್ದಿನ ಮೊಮ್ಮಗ

ಅಯೋಧ್ಯೆ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಸೋಮವಾರ ಬೆಳಗ್ಗೆ ಅಯೋಧ್ಯೆಯಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 

ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತಮ್ಮ ಕುಟುಂಬದ ಹಿರಿಯರೊಂದಿಗೆ ಬೆಂಗಳೂರಿನಿಂದ ಅಯೋಧ್ಯೆಗೆ ಆಗಮಿಸಿದ್ದ ಅವರು, ತಾವು ತಂಗಿದ್ದ ಹೋಟೆಲ್‌ನಲ್ಲಿಯೇ ಜನ್ಮದಿನವನ್ನು ಆಚರಿಸಿಕೊಳ್ಳಬೇಕಾಯಿತು. 

ಮಾಜಿ ಪ್ರಧಾನಿ ಹಾಗೂ ತಮ್ಮ ತಾತ ದೇವೇಗೌಡರು, ಅಜ್ಜಿ ಚನ್ನಮ್ಮ ಹಾಗೂ ತಂದೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಕ್ ತಿನ್ನಿಸಿ ನಿಖಿಲ್ ಆಶೀರ್ವಾದ ಪಡೆದುಕೊಂಡರು. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ನನ್ನ ಜನ್ಮದಿನ ಬಂದಿದ್ದು, ಅದೂ ಅಯೋಧ್ಯೆಯ ರಾಮನ ಸನ್ನಿಧಿಯಲ್ಲೇ ಆಚರಿಸಿಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಸುಕೃತವೇ ಸರಿ ಅಂತಾ ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಅವರು ಸಂತಸವನ್ನು ಹಂಚಿಕೊಂಡರು ಎಂದು ಜೆಡಿಎಸ್ ನ ಆಪ್ತ ಮೂಲಗಳು ತಿಳಿಸಿವೆ.