ಏರಿಕೆ ಕಂಡ ಪೆಟ್ರೋಲ್ ದರ : ಎಲ್ಲೆಲ್ಲಿ , ಎಷ್ಟಿದೆ ನೋಡಿ..

ಬೆಂಗಳೂರು : ಹಲವು ದಿನಗಳ ಬಳಿಕ ದೇಶದಲ್ಲಿ ಪೆಟ್ರೋಲ್ ದರದಲ್ಲಿ ಮತ್ತೆ ಏರಿಕೆಯಾಗಿದೆ.
ಭಾನುವಾರದಿಂದ ಪೆಟ್ರೋಲ್ ದರ ಏರುತ್ತಲೆ ಇದೆ. ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬಯಿ, ಚೆನ್ನೈ, ದೆಹಲಿ ನಗರದಲ್ಲಿ ಗಣನೀಯವಾಗಿ ಇಂಧನ ದರ ಏರಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 83.52 ರೂ. ( ₹0.14 ಪೈಸೆ ಏರಿಕೆ) ಮತ್ತು ಡೀಸೆಲ್ ದರ ಯಾವುದೇ ಬದಲಾವಣೆಯಾಗದೆ 77.88 ರೂ. ಇದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 17 ಪೈಸೆ ಏರಿಕೆಯಾಗಿ 80.90 ರೂ. ಆಗಿದೆ ಹಾಗೂ ಡೀಸೆಲ್ ದರ 73.56 ರೂ ಇದೆ.
ಮುಂಬಯಿನಲ್ಲಿ ಪೆಟ್ರೋಲ್ ದರ 13 ಪೈಸೆ ಏರಿಕೆಯಾಗಿ 87.58 ರೂ. ಆಗಿದೆ. ಡೀಸೆ ದರ 80.11 ರೂ. ಇದೆ.
ತಮಿಳುನಾಡು ರಾಜಧಾನಿ ಚೆನ್ನೈ ನಲ್ಲಿ ಪೆಟ್ರೋಲ್ ದರ 12 ಪೈಸೆ ಏರಿಕೆಯಾಗಿ 83.99 ರೂ. ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗದೆ 78.86 ರೂ. ಇದೆ.