ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ: ಇಂದು ಅಧಿಕಾರ ಸ್ವೀಕಾರ

ಬಿಸಿಸಿಐ ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆ: ಇಂದು ಅಧಿಕಾರ ಸ್ವೀಕಾರ

ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) 36ನೇ ಅಧ್ಯಕ್ಷರಾಗಿ ರೋಜರ್ ಬಿನ್ನಿ ಇಂದು ಮಂಗಳವಾರ ಅಧಿಕಾರ ಸ್ವೀಕರಿಸಲಿದ್ದಾರೆ. 

ಬಿನ್ನಿ ಅವರು ಸದ್ಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಮಂಗಳವಾರ ಮುಂಬೈ ನಗರದಲ್ಲಿ ಬಿಸಿಸಿಐ ಸರ್ವ ಸದದ್ಯರ ಸಭೆ ನಡೆಯಲಿದೆ. ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಲಿದೆ. ಹೀಗಾಗಿ ಈ ಸಭೆಯು ಔಪಚಾರಿಕ ಎನಿಸಿದೆ. 

ಐಪಿಎಲ್‌ ಮುಖ್ಯಸ್ಥ ಸ್ಥಾನಕ್ಕೆ ಅರುಣ್ ಧುಮಾಲ್ ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ. ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಶುಕ್ಲಾ, ಕಾರ್ಯದರ್ಶಿಯಾಗಿ ಜಯ್ ಶಾ, ಖಜಾಂಚಿಯಾಗಿ ಅಶೀಶ್ ಶೆಲಾರ್, ಜಂಟಿ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.