ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಇಬ್ಬರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಮತ್ತು ಸಂಸದ ಕಮಲ್‌ಜೀತ್ ಸೆಹ್ರಾವತ್ ಅವರ ಸಮ್ಮುಖದಲ್ಲಿ ಶುಕ್ರವಾರ ಇಬ್ಬರು ಎಎಪಿ ಕೌನ್ಸಿಲರ್‌ಗಳಾದ ರವೀಂದರ್ ಸೋಲಂಕಿ ಮತ್ತು ನರೇಂದರ್ ಗಿರ್ಸಾ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
"ಸೋಲಂಕಿ ಮತ್ತು ಗಿರ್ಸಾ ಪಕ್ಷ ಬದಲಾಯಿಸಿಲ್ಲ, ಕೇಜ್ರಿವಾಲ್ ಬದಲಾಗಿದ್ದಾರೆ. ಇದರಿಂದಾಗಿ ಅವರು ಎಎಪಿ ತೊರೆಯಬೇಕಾಯಿತು" ಎಂದು ಸೆಹ್ರಾವತ್ ಹೇಳಿದರು. ಅವರಿಬ್ಬರೂ ಎಎಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಂದು ಅವರು ಹೇಳಿದರು. ಫೆಬ್ರವರಿ 5ರಂದು ದೆಹಲಿ ಚುನಾವಣೆ ನಿಗದಿಯಾಗಿದೆ.