ಕುಂದಗೋಳ : ಕೃಷಿ ಇಲಾಖೆಯಲ್ಲಿ ವಿವಿಧ ಸೌಲಭ್ಯ - ಅರ್ಜಿಗೆ ನವೆಂಬರ್ 30 ಕೊನೆಯ ದಿನ

ಕುಂದಗೋಳ : 2024-25 ನೇ ಸಾಲಿಗೆ ಕೃಷಿ ಭಾಗ್ಯ ಪ್ಯಾಕೇಜ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ರೈತರು ಅರ್ಜಿಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಕುಂದಗೋಳ ಹಾಗೂ ರೈತ ಸಂಪರ್ಕ ಕೇಂದ್ರ ಸಂಶಿಯಲ್ಲಿ ನವೆಂಬರ್ 30 ಒಳಗಾಗಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಅರ್ಜಿದಾರರು ಕನಿಷ್ಠ 1 ಎಕರೆ ಜಮೀನನ್ನು ಹೊಂದಿರಬೇಕು ಹಿಂದಿನ ವರ್ಷಗಳಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮನರೇಗಾ ಯೋಜನೆಯಡಿ ಸೌಲಭ್ಯವನ್ನು ಪಡೆದಿರಬಾರದು.
ಪ್ಯಾಕೇಜ್ ಯೋಜನೆಯಡಿ ಕಡ್ಡಾಯವಾಗಿ ತಂತಿಬೇಲಿ, ಸೂಚನಾ ಫಲಕ, ಪಾಲಿಥೀನ ಹೊದಿಕೆಯನ್ನು ಅಳವಡಿಸಲು ಆಸಕ್ತ ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ನಿರ್ವಹಿಸಲಾಗುವ ಜೇಷ್ಠತಾ ಪಟ್ಟಿಯನ್ನು ಆಧರಿಸಿ ಫಲಾನುಭವಿಯನ್ನು ಆಯ್ಕೆ ಮಾಡಲಾಗುವುದು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳಿಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಲು ಈ ಮೂಲಕ ವಿನಂತಿಸಲಾಗಿದೆ.