ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಬಿಜೆಪಿ ಸೇರಿದ ಅರವಿಂದರ್ ಸಿಂಗ್ ಲವ್ಲಿ

ನವದೆಹಲಿ: ಇತ್ತೀಚೆಗೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಅವರು ಬಿಜೆಪಿ ಸೇರಿದ್ದಾರೆ.
ಈ ಹಿಂದೆ ಲವ್ಲಿ ಅವರು ಪಕ್ಷದ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್‌ಗೆ ಅಲ್ಲ ಮತ್ತು ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ ಎಂದು ಹೇಳಿದ್ದರು. ನಾಲ್ವರು ಮಾಜಿ ಕಾಂಗ್ರೆಸ್ ನಾಯಕರಾದ ರಾಜ್‌ಕುಮಾರ್ ಚೌಹಾಣ್, ನೀರಜ್ ಬಸೋಯಾ, ನಸೀಬ್ ಸಿಂಗ್ ಮತ್ತು ಅಮಿತ್ ಮಲಿಕ್ ಕೂಡ ಲವ್ಲಿ ಅವರೊಂದಿಗೆ ಬಿಜೆಪಿ ಸೇರಿದರು.