ಬೆಂಗಳೂರು: ನಟ ಚೇತನ್ ಗೆ ಬಿಡುಗಡೆ ಭಾಗ್ಯ

ಆನೇಕಲ್ : ಹೋರಾಟಗಾರನಿಗೆ ಸೆರೆಮನೆಯೇ ಅರಮನೆಯಂತೆ, ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಕುವೆಂಪುರವರ ವಿಚಾರಗಳು ಎಷ್ಟು ಶಕ್ತಿ ಇದೆ ..ಮತ್ತೆ ಬದಲಾವಣೆ ಮಾಡಲು ಎಷ್ಟು ಹುಮ್ಮಸ್ಸಿದೆ. ಅದನ್ನು ಜಗತ್ತಿಗೆ ಸಾರುವ ಕೆಲಸ ಕರ್ನಾಟಕದಿಂದ ಶುರುವಾಗಿದೆ ಎಂದು ನಟ ಚೇತನ್ ತಿಳಿಸಿದರು .. ಕೇಂದ್ರ ಕಾರಗೃಹ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ನಟ ಚೇತನ್ ಇದೆ ತಿಂಗಳ 23 ನೇ ತಾರೀಕು ಸಾಮಾಜಿಕ ಜಾಲತಾಣದಲ್ಲಿ ಒಂದು ಟ್ವಿಟ್ ಹಾಕಿದ್ದಕ್ಕೆ ಸುಮೋಟ್ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದರು.. ಅವಹೇಳನಕಾರಿ ಹೇಳಿಕೆ ಇರಲಿಲ್ಲ ಆದರೂ ಪಿತೂರಿಯಿಂದ ಕೇಸ್ ಹಾಕಿ ಜೈಲು ಕಳಿಸಿದರು ನಟ ಚೇತನ ಬಿಡುಗಡೆ ಬಳಿಕ ಮಾಧ್ಯಮಗಳ ಜೊತೆಗೆ ಮಾತುಕತೆ ಮಾಡಿದ್ದಾರೆ ಪ್ರಶ್ನೆ ಮಾಡೋದು ನಮ್ಮ ಹಕ್ಕು ಅದು ಮಾತ್ರವಲ್ಲ ಅದು ನಮ್ಮ ಜವಾಬ್ದಾರಿ ನಮ್ಮ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ.. ಪೊಲೀಸರು ಕೈಗೊಂಡ ಕ್ರಮ ಸರಿಯಿತ್ತಾ ಎಂಬ ಪ್ರಶ್ನೆಗೆ!? ಪೊಲೀಸರ ಕ್ರಮ ಅಸಂವಿಧಾನಿಕ ವಾದದ್ದು ನನ್ನ ಟ್ವೀಟ್ ನಲ್ಲಿ ಯಾವುದೇ ಅವಹೇಳನಕಾರಿ ಇಲ್ಲ ಯಾವುದೇ ಪ್ರಚೋದನಕಾರಿ ಇಲ್ಲ ಹಾಗಾದ್ರೆ ಅಸೆಂಬ್ಲಿಯಲ್ಲಿ ರೇಪ್ ಬಗ್ಗೆ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ ಅವರನ್ನು ಯಾಕೆ ಬಂದಿಸಿಲ್ಲ .. ಮಹಿಳಾ ವಿರೋಧಿ ಹೇಳಿಕೆ ನೀಡಿದ್ದನ್ನು ಟ್ವಿಟ್ ಮಾಡಿದ್ದಕ್ಕೆ ಆರೆಸ್ಟ್ ಮಾಡ್ತೀರಲ್ಲ ಇದು ಅಸಂವಿಧಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದಸಿದರು .. ಇನ್ನು ನಟ ಚೇತನ್ ಬಿಡುಗಡೆ ಆದ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು ಬೆಂಬಲಿಗರು ಅಭಿಮಾನಿಗಳು ಭಾಗಿಯಾಗಿದ್ದರು.