ಬೆಂಗಳೂರು : ಸಾರಿಗೆ ಮುಷ್ಕರ - ಕೋರ್ಟ್ ಆದೇಶ ಹಿನ್ನೆಲೆ 10.30ಕ್ಕೆ ಮಹತ್ವದ ಸಭೆ ಕರೆದ ಜಂಟಿ ಕ್ರಿಯಾ ಸಮಿತಿ

ಬೆಂಗಳೂರು : ಸಾರಿಗೆ ಮುಷ್ಕರ - ಕೋರ್ಟ್ ಆದೇಶ ಹಿನ್ನೆಲೆ 10.30ಕ್ಕೆ ಮಹತ್ವದ ಸಭೆ ಕರೆದ ಜಂಟಿ ಕ್ರಿಯಾ ಸಮಿತಿ

ಬೆಂಗಳೂರು : ವಿವಿಧ ಬೇಡಿಕೆ‌ ಈಡಿರಿಸುವಂತೆ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಬಸ್ ಮುಷ್ಕರ ಆರಂಭಿಸಿದ್ದಾರೆ. ಆದ್ರೆ ಒಂದು ದಿನ ಮುಷ್ಕರ ಮುಂದೂಡಿ ಎಂದು ನಿನ್ನೆ ಕೋರ್ಟ್ ಆದೇಶ ನೀಡಿತ್ತು. ಕೋರ್ಟ್ ಆದೇಶ ನಮ್ಮ ಕೈ ಸೇರಿಲ್ಲ, ನಾವು ಮುಷ್ಕರ ಮಾಡ್ತೀವಿ ಎಂದು ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡ್ತಿದ್ದಾರೆ. 

ಆದ್ರೆ ನಿನ್ನೆ ರಾತ್ರಿ ಕೋರ್ಟ್ ಆದೇಶ ಕೈಸೇರಿರುವ ಹಿನ್ನೆಲೆಯಲ್ಲಿ ಅನಂತ್ ಸುಬ್ಬರಾವ್ ನೇತೃತ್ವದಲ್ಲಿಇಂದು ಬೆಳಗ್ಗೆ 10.30ಕ್ಕೆ ಮಹತ್ವದ ಸಭೆಯನ್ನ ಸಾರಿಗೆ ಜಂಟಿ ಕ್ರಿಯಾ ಸಮಿತಿ ಕರೆದಿದೆ.‌ ಸಭೆಯಲ್ಲಿ ಕೋರ್ಟ್ ಆದೇಶದ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಕೋರ್ಟ್ ಪ್ರತಿ ತಲುಪಿರೋದ್ರಿಂದ ಒಂದು ದಿನ ಮುಷ್ಕರ ಮುಂದೂಡುವ ಸಾಧ್ಯತೆ‌ ಇದೆ ಎನ್ನಲಾಗಿದೆ. 10.30ಕ್ಕೆ ನಡೆಯುವ ಸಭೆಯಲ್ಲಿ ಅಧಿಕೃತ ತೀರ್ಮಾನ ತಗೆದುಕೊಂಡು ಘೋಷಿಸುವ ಸಾಧ್ಯತೆ ಇದೆ. ಕೋರ್ಟ್ ವಿಚಾರಣೆಯ ಬಳಿಕ ಮತ್ತೆ ಮುಷ್ಕರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.