ದೆಹಲಿಯಲ್ಲಿ ಇಂದು ಸಿಡಬ್ಲ್ಯೂಎಂಎ ಸಭೆ- ಭೌತಿಕವಾಗಿ ಭಾಗಿಯಾಗಲಿರೋ ಕರ್ನಾಟಕದ ಅಧಿಕಾರಿಗಳು

ದೆಹಲಿಯಲ್ಲಿ ಇಂದು ಸಿಡಬ್ಲ್ಯೂಎಂಎ ಸಭೆ- ಭೌತಿಕವಾಗಿ ಭಾಗಿಯಾಗಲಿರೋ ಕರ್ನಾಟಕದ ಅಧಿಕಾರಿಗಳು

ದೆಹಲಿ/ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆ ಮುಂದುವರಿದಿದೆ. ಅತ್ತ ದೆಹಲಿಯಲ್ಲಿ ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ಇನ್ನು ಕೆಲವೇ ಹೊತ್ತಿನಲ್ಲಿ ಆರಂಭವಾಗಲಿದೆ. 

ಈ ಸಭೆಗೆ ಕರ್ನಾಟಕದ ನೀರಾವರಿ ಇಲಾಖೆ ಅಧಿಕಾರಿಗಳು, ಕಾನೂನು ತಜ್ಞರು ಹಾಗೂ ಮತ್ತಿತರರು ಆನ್‌ಲೈನ್ ಅಥವಾ ವರ್ಚುವಲ್ ಸಭೆಯ ಬದಲಾಗಿ ಖುದ್ದು ಹಾಜರಾಗಲಿದ್ದಾರೆ. ಇಲ್ಲಿಯವರೆಗೆ ಹೆಚ್ಚಾಗಿ ವರ್ಚುವಲ್ ಮೂಲಕ ತಮ್ಮ ಪ್ರತಿಕ್ರಿಯೆ ತೋರುತ್ತಿದ್ದ ಮತ್ತು ಸಿಡಬ್ಲ್ಯೂ ಎಂಎ ಗೆ ಅಹವಾಲು ಸಲ್ಲಿಸುತ್ತಿದ್ದುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದನ್ನು ಮನಗಂಡ ಸರ್ಕಾರ ರಾಜ್ಯದ ಕಾವೇರಿ ವಿಚಾರಣಾ ತಂಡಕ್ಕೆ ಕಟ್ಟಪ್ಪಣೆ ಹೊರಡಿಸಿದ ಫಲವಾಗಿ ಇಂದಿನ ಸಿಡಬ್ಲ್ಯೂ ಎಂಎ ಸಭೆಗೆ ನೇರ ಹಾಜರಾತಿ ಹಾಕಲಿದ್ದಾರೆ. 

ಇನ್ನು ಉಭಯ ರಾಜ್ಯಗಳ ಕಾವೇರಿ ನೀರಿನ ಹಂಚಿಕೆ ಕುರಿತಾದ ಚರ್ಚೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ತಮ್ಮ ತಮ್ಮ ಹಕ್ಕೊತ್ತಾಯ ಮಂಡಿಸಲಿವೆ. ಸೆಪ್ಟೆಂಬರ್ 26 ರಂದು ನಡೆದ ಕಾವೇರಿ ನಿರ್ವಹಣಾ ಸಮಿತಿ ಸಭೆಯಲ್ಲಿ ಕರ್ನಾಟಕ ಅಂದಿನಿಂದ ಹದಿನೈದು ದಿನಗಳ ಕಾಲ ಐದು ಸಾವಿರ ಕ್ಯೂಸೆಕ್ ಬದಲಿಗೆ ಮೂರು ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸೂಚನೆ ನೀಡಿತ್ತು. ಅದರೆ, ಇದಕ್ಕೆ ಕ್ಯಾತೆ ತೆಗೆದಿದ್ದ ತಮಿಳುನಾಡು ಕರ್ನಾಟಕದ ಜಲಾಶಯಗಳಲ್ಲಿ ಒಳಹೆಇವಿನ ಪ್ರಮಾಣ ಹೆಚ್ಚಿದ್ದು ದಿನವೊಂದಕ್ಕೆ 12500 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಬೇಕೆಂದು ಮೊಂಡುವಾದವನ್ನು ಮುಂಸಿಟ್ಟಿತ್ತು. ಈ ವೇಳೆ ತಮಿಳುನಾಡಿಗೆ ಮೂರು ಸಾವಿರ ಕ್ಯೂಸೆಕ್ ನೀರು ಹರಿಸುವುದೇ ಸೂಕ್ತವೆಂಬಂತೆ ಸಿಡಬ್ಲ್ಯೂ ಎಂಆರ್ ಸೂಚನೆಯನ್ನು ಪಾಲಿಸುವತ್ತ ಸರ್ಕಾರ ಮುಂದಾಗಿತ್ತು.