ಜಗತ್ತಿನಾದ್ಯಂತ ಮತ್ತೆ ಟ್ವಿಟ್ಟರ್ ಡೌನ್: ತನ್ನಷ್ಟಕ್ಕೆ ಲಾಗೌಟ್

ಜಗತ್ತಿನಾದ್ಯಂತ ಮತ್ತೆ ಟ್ವಿಟ್ಟರ್ ಡೌನ್: ತನ್ನಷ್ಟಕ್ಕೆ ಲಾಗೌಟ್

ನವದೆಹಲಿ: ಭಾರತ, ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಮತ್ತೆ ಟ್ವಿಟ್ಟರ್‌ ಡೌನ್‌ ಆಗಿದ್ದು, ಸಾವಿರಾರು ಜನರು ಟ್ವೀಟ್ ಮಾಡಲು ಆಗದೆ ಪರದಾಡಿದ್ದಾರೆ. 

ಟ್ವಟ್ಟರ್ ಖಾತೆ ತನ್ನಷ್ಟಕ್ಕೆ ಲಾಗೌಟ್ ಆಗಿದ್ದಲ್ಲದೆ, ‘Something went wrong, but don’t fret — it’s not your fault. Let’s try again ಎಂಬ ಸಂದೇಶವೂ ಇತ್ತು. ಇದರಿಂದಾಗಿ ಬಳಕೆದಾರರು ತಮ್ಮ ಪ್ರೊಫೈಲ್‌ಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅಕ್ಟೋಬರ್ ಅಂತ್ಯದಲ್ಲಿ ಎಲೋನ್ ಮಸ್ಕ್ ಸ್ವಾಧೀನಪಡಿಸಿಕೊಂಡ ನಂತರ ಟ್ವಿಟರ್ ಸ್ಥಗಿತಗೊಂಡಿರುವುದು ಇದು ಮೂರನೇ ಬಾರಿ. 

ಡೌನ್ ಡಿಟೆಕ್ಟರ್ ವೆಬ್‌ಸೈಟ್ ಪ್ರಕಾರ ದೆಹಲಿ, ನಾಗ್ಪುರ, ಮುಂಬೈ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಹಲವಾರು ನಗರಗಳಲ್ಲಿ ಟ್ವಿಟ್ಟರ್ ಡೌನ್ ಆಗಿದೆ. ಹಲವು ಬಾರಿ ರಿಫ್ರೆಶ್ ಮಾಡಿದರೂ ಬಳಕೆದಾರರಿಗೆ ಲಾಗ್-ಇನ್ ಮಾಡಲು ಅಥವಾ ಲಾಗ್‌ಔಟ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬಳಕೆದಾರರು ಅಸಮಾಧಾನ ಹೊರ ಹಾಕಿದ್ದಾರೆ. 

ವೆಬ್‌ಸೈಟ್‌ಗೆ ಪ್ರಕಾರ, ಜಗತ್ತಿನಾದ್ಯಂತ ಬಳಕೆದಾರರು ಬೆಳಿಗ್ಗೆ 6 ಗಂಟೆಯ ನಂತರ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್ ಸೇರಿದಂತೆ ಇತರ ದೇಶಗಳ ಬಳಕೆದಾರರು ಕೂಡ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದೆ.