ಚೆನ್ನೈ ಏರಪೋರ್ಟ್‌ನಲ್ಲಿ ದುಬೈನಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟಿವ್
ಚೆನ್ನೈ: ದುಬೈನಿಂದ ಬಂದ ಇಬ್ಬರು ಪ್ರಯಾಣಿಕರಿಗೆ ಇಂದು ಚೆನ್ನೈ ವಿಮಾನ ನಿಲ್ದಾಣದಲ್ಲಿಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಬ್ಬರೂ ಪ್ರಯಾಣಿಕರು ಪುದುಕೊಟ್ಟೈ ಜಿಲ್ಲೆಯ ಅಲಂಗುಡಿಯವರಾಗಿದ್ದು, ಅವರ ಪರೀಕ್ಷಾ ಮಾದರಿಗಳನ್ನು ರಾಜ್ಯ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ತಿಳಿಸಿದೆ.
ಈ ಹಿಂದೆ ಮಧುರೈ ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾದ ನಂತರ ಚೀನಾದಿಂದ ಶ್ರೀಲಂಕಾ ಮೂಲಕ ವಿರುದುನಗರಕ್ಕೆ ವಾಪಾಸ್ ಆದ ಮಹಿಳೆ ಮತ್ತು ಅವರ 6 ವರ್ಷದ ಮಗಳಿಗೆ ಕೊವಿಡ್ ಪಾಸಿಟಿವ್ ದೃಢಪಟ್ಟಿತ್ತು. ತಮಿಳುನಾಡಿನಲ್ಲಿ ಪ್ರತಿದಿನ ಸರಾಸರಿ 10 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಅಲರ್ಟ್ ಘೋಷಿಸಲಾಗಿದೆ.