ಗರಿಷ್ಟ ಮಟ್ಟ ತಲುಪಿದ ಚಿನ್ನದ ಬೆಲೆ: ₹1,025 ಏರಿಕೆ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 1,025 ರೂ.ಗಳಷ್ಟು ಏರಿಕೆಯಾಗಿದೆ. ಈ ಮೂಲಕ ಪ್ರತಿ 10 ಗ್ರಾಂಗೆ ಗರಿಷ್ಠ 61,080ರೂ.ಗೆ ಬೆಲೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ, ಅಮೂಲ್ಯ ಲೋಹವು 10 ಗ್ರಾಂಗೆ 60,055 ರೂ.ಗೆ ಸ್ಥಿರವಾಗಿತ್ತು.
ಚಿನ್ನದ ಹಠಾತ್ ಏರಿಕೆಗೆ ತಜ್ಞರು ಹಲವಾರು ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ದುರ್ಬಲ ಯುಎಸ್ ಡೇಟಾ, ಯುಎಸ್ ಡಾಲರ್ ಮೌಲ್ಯದ ಕುಸಿತ, ಯುಎಸ್ ಫೆಡ್ ಬಡ್ಡಿ ದರಗಳ ಹೆಚ್ಚಿನ ಮಟ್ಟ, ಆರ್ಥಿಕ ಅನಿಶ್ಚಿತತೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆ ಸೇರಿವೆ. ತಜ್ಞರ ಪ್ರಕಾರ, ಈ ಕಾರಣಗಳಿಂದಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.