ದೆಹಲಿ: ದೆಹಲಿಯಲ್ಲಿ ಹೆಚ್ಚಿದ ಶೀತ ವಾತಾವರಣ
ದೆಹಲಿ: ಸಫ್ದರ್‌ಜಂಗ್ ಮತ್ತು ಲಾಲಂನಲ್ಲಿ ಕ್ರಮವಾಗಿ 4.6 ಮತ್ತು 6.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಪರಿಣಾಮ ದೆಹಲಿಯ ಜನರು ಭಾರೀ ಶೀತ ವಾತಾವರಣ ಅನುಭವಿಸುತ್ತಿದ್ದಾರೆ.
ರಾಜಧಾನಿಯಲ್ಲಿ ಕಳೆದ 2021ರಲ್ಲಿದಾಖಲಾಗಿದ್ದ ತಾಪಮಾನಕ್ಕೂ ಇದು ಅತ್ಯಂತ ಕಡಿಮೆ ತಾಪಮಾನ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿ, ಶೀತ ವಾತಾವರಣ ಹೆಚ್ಚಿರುವುದರಿಂದ ದೆಹಲಿ ಜನರು ಬೆಚ್ಚನೆಯ ಬಟ್ಟೆಗಳನ್ನೂ ಧಿರಿಸಿಕೊಂಡೇ ಹೊರಗಡೆ ಬರುವಂತಾಗಿದೆ. ಎಷ್ಟೋ ಜನರು ಚಳಿ ಹೊಡೆತಕ್ಕೆ ಹೊರಗಡೆ ಬರುವುದಕ್ಕೂ ಹಿಂಜರಿಯುತ್ತಿದ್ದಾರೆ.