ಕೆ.ಎಲ್. ರಾಹುಲ್, ಅತಿಯಾ ಶೆಟ್ಟಿಗೆ ಹೆಣ್ಣು ಮಗು ಜನನ

ಕೆ.ಎಲ್. ರಾಹುಲ್, ಅತಿಯಾ ಶೆಟ್ಟಿಗೆ ಹೆಣ್ಣು ಮಗು ಜನನ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ, ನಟಿ ಅತಿಯಾ ಶೆಟ್ಟಿ ಅವರಿಗೆ ಹೆಣ್ಣು ಮಗು ಜನಿಸಿದೆ. 

ದಂಪತಿಯು ಸೋಮವಾರ ತಮ್ಮ ಮಗಳು ಜನಿಸಿದ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದಂಪತಿಗೆ ಶುಭ ಹಾರೈಸಿದರು. ರಾಹುಲ್ ಮತ್ತು ಅತಿಯಾ ಜನವರಿ 23, 2023 ರಂದು ವಿವಾಹವಾಗಿದ್ದರು. 

ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣಕ್ಕಾಗಿ ಇಂದು (ಸೋಮವಾರ) ಲಖನೌ ಸೂಪರ್ ಜೈಂಟ್ ವಿರುದ್ಧ ನಡೆದ ಐಪಿಎಲ್ ಪಂದ್ಯವನ್ನು ರಾಹುಲ್ ತಪ್ಪಿಸಿಕೊಂಡಿದ್ದರು.