ವಿಧಾನ ಪರಿಷತ್ ಚುನಾವಣೆ ಮತದಾನ ಆರಂಭ
ಕುಂದಗೋಳ : ಹಾವೇರಿ ಧಾರವಾಡ ಗದಗ ಸಂಪೂರ್ಣ ಗ್ರಾಮ ಪಂಚಾಯಿತಿ ಸ್ಥಳೀಯ ಚುನಾವಣೆ ಇಂದು ಆರಂಭವಾಗಿದ್ದು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಕುಂದಗೋಳ ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ನಡೆದಿದ್ದು ಕೊರೊನಾ ವೈರಸ್ ಮುಂಜಾಗ್ರತೆ ಕ್ರಮವಾಗಿ ಮಾಸ್ಕ್, ಸ್ಯಾನಿಟೈಜರ್ ಜೊತೆ ಸಾಮಾಜಿಕ ಅಂತರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಮತದಾನಕ್ಕೆ ಒಳ ಬಿಡಲಾಗುತ್ತಿದ್ದು, ಗಂಟೆ ಹನ್ನೇರೆಡಾದರೂ ಕೆಲ ಗ್ರಾಮ ಪಂಚಾಯಿತಿ ಚುನಾವಣೆ ಬೂತ್'ಗಳಲ್ಲಿ ಸದಸ್ಯರು ಮತ ಚಲಾಯಿಸಲು ಬಂದಿಲ್ಲಾ. ಮತದಾನ ಕೊಠಡಿ ಸುತ್ತ ಸೂಕ್ತ ವ್ಯವಸ್ಥೆ ಕೈಗೊಂಡಿದ್ದು ಪ್ರತಿ ಚುನಾವಣೆ ಬೂತ್'ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರತರಾಗಿದ್ದಾರೆ.