'ವಸಂತ ಗೀತ'ದಲ್ಲಿ ಅರಳಿದ 'ಅರಸು' ಇನ್ನು ನೆನಪು ಮಾತ್ರ.!

'ವಸಂತ ಗೀತ'ದಲ್ಲಿ ಅರಳಿದ 'ಅರಸು' ಇನ್ನು ನೆನಪು ಮಾತ್ರ.!

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಪುನೀತ್​ ರಾಜ್​ಕುಮಾರ್ (46) ಅವರು ಇಂದು ನಿಧನರಾಗಿದ್ದಾರೆ. ಹೃದಯಾಘಾತ ಹಿನ್ನೆಲೆಯಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಮ್ಮನ್ನೆಲ್ಲ ಅಗಲಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು 1975ರ ಮಾರ್ಚ್ 17ರಂದು ಜನಿಸಿದ್ದರು. ಬಾಲ್ಯದಲ್ಲೇ ಪುನೀತ್ ತಮ್ಮ ತಂದೆ ಡಾ. ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿ ಅನೇಕರ ಮೆಚ್ಚುಗೆ ಗಳಿಸಿದ್ದರು. ಅಪ್ಪು ಅವರು 'ಬೆಟ್ಟದ ಹೂವು' ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಪುನೀತ್ ರಾಜ್‌ಕುಮಾರ್‌ ಅವರು ಮೊದಲ ಪ್ರಮುಖ ಪಾತ್ರದಲ್ಲಿ 'ಅಪ್ಪು' ಚಿತ್ರ (2002ರಲ್ಲಿ) ಅಭಿನಯಿಸಿದ್ದರು. ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಪ್ರಸಿದ್ಧ ಟಿವಿ ಶೋ 'ಕನ್ನಡದ ಕೋಟ್ಯಧಿಪತಿ' ಎಂಬ ನಿರೂಪಣೆ ಮಾಡಿದ್ದರು.