ವಂದೇ ಭಾರತ್ ರೈಲಿನ ಮೇಲೆ ಟಾಟಾ ಹೆಸರು - ರೈಲು ನಿರ್ಮಾಣ ಕಾರ್ಯಕ್ಕೆ ಟಾಟಾ ಗ್ರೂಪ್ ಎಂಟ್ರಿ

ವಂದೇ ಭಾರತ್ ರೈಲಿನ ಮೇಲೆ ಟಾಟಾ ಹೆಸರು - ರೈಲು ನಿರ್ಮಾಣ ಕಾರ್ಯಕ್ಕೆ ಟಾಟಾ ಗ್ರೂಪ್ ಎಂಟ್ರಿ

ನವದೆಹಲಿ : ನಷ್ಟದಲ್ಲಿದ್ದ ಏರ್‌ಇಂಡಿಯಾ ಕಂಪನಿ ಕೇಂದ್ರ ಸರ್ಕಾರದಿಂದ ಖರೀದಿ ಮಾಡಿ ಲಾಭದತ್ತ ಕೊಂಡೊಯ್ಯುತ್ತಿರುವ ದೇಶದ ಹೆಮ್ಮೆಯ ಕಂಪನಿ ಟಾಟಾ ಇನ್ನು ವಂದೇ ಭಾರತ್‌ ರೈಲಿನ ನಿರ್ಮಾಣ ಕಾರ್ಯದಲ್ಲೂ ಭಾಗಿಯಾಗಲಿದೆ. ಮೋದಿ ಸರ್ಕಾರದ ಹೆಮ್ಮೆಯ ಸೆಮಿಹೈಸ್ಪೀಡ್‌ ರೈಲು ವಂದೇ ಭಾರತ್‌ ನಿರ್ಮಾಣದಲ್ಲಿಯೂ ಟಾಟಾ ಗ್ರೂಪ್‌ ಕೈಜೋಡಿಸಲಿದೆ. 

ಹೌದು, ವಂದೇ ಭಾರತ್ ರೈಲಿನ ಹೆಚ್ಚುತ್ತಿರುವ ಜನಪ್ರಿಯತೆಯ ದೃಷ್ಟಿಯಿಂದ, ಟಾಟಾ ಸ್ಟೀಲ್‌ ಈ ರೈಲಿನ ನಿರ್ಮಾಣ ಕಾರ್ಯದಲ್ಲಿ ಜೊತೆಯಾಗುವ ಆಸಕ್ತಿ ವ್ಯಕ್ತಪಡಿಸಿದೆ. ಮುಂದಿನ ಒಂದು ವರ್ಷದಲ್ಲಿ ಟಾಟಾ ಸ್ಟೀಲ್‌ 22 ವಂದೇ ಭಾರತ್‌ ರೈಲನ್ನು ನಿರ್ಮಾಣ ಮಾಡುವುದಾಗಿ ನಿರ್ಧಾರ ಮಾಡಿದೆ. ಈ ಕುರಿತಾಗಿ ಟಾಟಾ ಸ್ಟೀಲ್‌ ಹಾಗೂ ಭಾರತೀಯ ರೈಲ್ವೇಸ್‌ ನಡುವೆ ಇತ್ತೀಚೆಗೆ ಒಪ್ಪಂದ ಕೂಡ ಏರ್ಪಟ್ಟಿದೆ. 

ಮುಂದಿನ ಎರಡು ವರ್ಷಗಳಲ್ಲಿ 200 ಹೊಸ ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಗುರಿಯನ್ನು ರೈಲ್ವೇ ಸಚಿವಾಲಯ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ರೈಲಿನ ನಿರ್ಮಾಣ ಕಾರ್ಯವನ್ನು ವೇಗಗೊಳಿಸಲು, ಭಾರತೀಯ ರೈಲ್ವೆ ಮತ್ತು ಟಾಟಾ ಸ್ಟೀಲ್ ನಡುವೆ ಹಲವಾರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

ಭಾರತೀಯ ರೈಲ್ವೇ ವಂದೇ ಭಾರತ್ ರೇಕ್‌ಗಳ ಭಾಗಗಳನ್ನು ತಯಾರಿಸಲು ಟಾಟಾ ಸ್ಟೀಲ್‌ಗೆ ಸುಮಾರು 145 ಕೋಟಿ ರೂಪಾಯಿಗಳ ಟೆಂಡರ್ ಅನ್ನು ನೀಡಿದೆ. 12 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ 22 ರೈಲುಗಳಿಗೆ ಸೀಟ್‌ಗಳನ್ನು ನಿರ್ಮಾಣ ಮಾಡುವ ಆರ್ಡರ್‌ಅನ್ನು ಈ ಕಂಪನಿಯು ಪಡೆದುಕೊಂಡಿದೆ.