ರೋಹಿತ್ ಶರ್ಮಾ ನಾಯಕತ್ವದಲ್ಲಿ 1000ನೇ ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾ

ರೋಹಿತ್ ಶರ್ಮಾ ನಾಯಕತ್ವದಲ್ಲಿ 1000ನೇ ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾ

ವೆಸ್ಟ್‌ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.ಈ ಮೂಲಕ ಭಾರತ ಇಲ್ಲಿವರೆಗೂ ಆಡಿದ ಪಂದ್ಯಗಳಲ್ಲಿ ಈಗ 1000ನೇ ಪಂದ್ಯವನ್ನ ಗೆದ್ದಂತಾಗಿದೆ. 

 

ಏಕ ದಿನದ ಕಪ್ತಾನ್ ರೋಹಿತ್ ಶರ್ಮಾ ನಾಯಕತ್ವದಲ್ಲಿಯೇ ಭಾರತ ಗೆಲುವು ಸಾಧಿಸಿರೋದು ವಿಶೇಷ.1000 ನೇ ಏಕ ದಿನ ಪಂದ್ಯ ಗೆಲ್ಲಿಸಿರೋ ಖ್ಯಾತಿಗೂ ರೋಹಿತ್ ಶರ್ಮಾ ಈಗ ಪಾತ್ರರಾಗಿದ್ದಾರೆ. 

 

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ, ವೆಸ್ಟ್‌ಇಂಡೀಸ್ ತಂಡವನ್ನ ಕೇವಲ 177 ರನ್‌ ಕಟ್ಟಿಹಾಕಿತ್ತು. 

 

ಈ ಪುಟ್ಟ ಮೊತ್ತವನ್ನ ಚೇಜ್ ಮಾಡಿರೋ ಭಾರತ ತಂಡ, 6 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿದೆ.