Breaking: IPL 2025ರ ಪ್ಲೇಆಫ್, ಫೈನಲ್‌ ಪಂದ್ಯಗಳಿಗೆ ಸ್ಥಳ ನಿಗದಿ

Breaking: IPL 2025ರ ಪ್ಲೇಆಫ್, ಫೈನಲ್‌ ಪಂದ್ಯಗಳಿಗೆ ಸ್ಥಳ ನಿಗದಿ

ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಸೀಸನ್‌ನ ಪ್ಲೇಆಫ್‌ಗಳ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3 ರಂದು ಫೈನಲ್ ಪಂದ್ಯ ನಡೆಯಲಿದೆ. 

ಬಿಸಿಸಿಐ ಗೌರವ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಪ್ಲೇಆಫ್ ಹಂತವು ಮೇ 29ರ ಗುರುವಾರ ನ್ಯೂ ಚಂಡೀಗಢದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1ರೊಂದಿಗೆ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ್ದಾರೆ. ಇದರಲ್ಲಿ ಲೀಗ್ ಹಂತದ ಅಗ್ರ ಎರಡು ತಂಡಗಳು ಭಾಗವಹಿಸುತ್ತವೆ. ಮೇ 30ರ ಶುಕ್ರವಾರದಂದು ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯದೊಂದಿಗೆ ಅದೇ ಸ್ಥಳದಲ್ಲಿ ಆಡಲಿವೆ ಎಂದು ಮಾಹಿತಿ ನೀಡಿದ್ದಾರೆ.