18 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ : ಉತ್ತಮ ನಿರ್ಧಾರ
ಮಹಾರಾಷ್ಟ್ರ: ಪ್ರಸ್ತುತದ ಬದುಕಿನಲ್ಲಿ ಮೊಬೈಲ್ ಇಲ್ಲವೆಂದರೇ ಜೀವನವೇ ಇಲ್ಲಾ ಎನ್ನುವಂತ್ತಾಗಿದೆ. ಇದರ ಮಧ್ಯೆ ಈಗ ಮಹಾರಾಷ್ಟ್ರದ ಹಳ್ಳಿಯಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡಲಾಗಿದೆ.ಹೌದು ಮಹಾರಾಷ್ಟ್ರದ ಯವತ್ಮಲ್ ಜಿಲ್ಲೆಯ ಬನ್ಸಿ ಎಂಬ ಗ್ರಾಮದಲ್ಲಿ ಯುವಕರು, ಮಕ್ಕಳು ಮೊಬೈಲ್ ಬಳಸಬಾರದು. ಮೊಬೈಲ್ ಬಳಸಿದ್ದು ಗೊತ್ತಾದರೆ ದಂಡ ಹಾಕೋದು ಗ್ಯಾರಂಟಿ ಎಂದು ಊರಿನ ಅಧ್ಯಕ್ಷರು ಡಂಗೂರ ಬಾರಿಸಿದ್ದಾರೆ.
ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಈ ತೀರ್ಮಾನವನ್ನ ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ನಮ್ಮ ಯುವಕರು ಹಾಗೂ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿ, ಅವರು ಹಿರಿಯರು ಹೇಳಿದ ಕೆಲಸಗಳನ್ನ ಮಾಡುತ್ತಿಲ್ಲ. ಮಕ್ಕಳು ಮೊಬೈಲ್ ನಲ್ಲಿ ಗೇಮ್ಸ್, ವಿವಿಧ ವೆಬ್ ಸೈಟ್ ಗಳನ್ನ ನೋಡ್ತಿದ್ದಾರೆ.ಎಲ್ಲ ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡದಂತೆ ಹಾಗೂ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು.
ಒಂದು ವೇಳೆ ನಮ್ಮ ಮಾತು ಕೇಳಿಲ್ಲ ಅಂದರೆ ದಂಡ ಹಾಕುತ್ತೇವೆ ಎಂದು ಬನ್ಸಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಗಜನಾನ್ ತಾಳೆ ಹೇಳಿದ್ದಾರೆ.